ಜೀವನದ ಮಜಲಿನಲ್ಲಿ ಬರುವ ಪ್ರತೀ ಆಗುಹೋಗುಗಳ ಕುರಿತು ಈಗಾಗಲೇ ಸಿನೆಮಾಗಳು ಸೆಟ್ಟೇರಿವೆ.ನಮ್ಮದೇ ಜೀವನದ ದಿನನಿತ್ಯದ ಕಥೆಯ ಎಳೆಗಳಿಗೆ ಇನ್ನಷ್ಟು ಸಂದರ್ಭಗಳನ್ನ ಪೋಣಿಸಿ ವಿಭಿನ್ನ ವೆನಿಸೋ ಶೈಲಿಯಲ್ಲಿ ಚಿತ್ರಗಳು ಬಂದಾಗ ತೀರಾ ಆಪ್ತವೇನೋ ಎನಿಸುತ್ವೆ. ಈ ಬಗೆಯ ಚಿತ್ರದ ಸಾಲಿಗೆ ಈಗ ಸೇರ್ಪಡೆಯಾಗ್ತಿರೋದು ಗುರುದೇಶಪಾಂಡೆ ನಿರ್ಮಾಣದ ‘ಜಂಟಲ್ ಮನ್’.
ಚಿತ್ರದ ಹೆಸರು ಕೇಳಿದಾಕ್ಷಣ ನಾಯಕ ಪ್ರಜ್ವಲ್ ರನ್ನ ಅಷ್ಟು ಜಂಟಲ್ ಮ್ಯಾನ್ ಆಗಿ ತೋರಿಸಿದ್ದಾರ..? ಅಂತ ಕನ್ಫ್ಯೂಸ್ ಆಗ್ಬೇಡಿ.ಯಾಕಂದ್ರೆ ಚಿತ್ರದಲ್ಲಿ ಹೀರೋ ಫುಲ್ ನಿದ್ರಾಮ್ಯಾನ್. ಹೌದು ಸುಮಾರು 18 ಗಂಟೆ ನಿದ್ರೆಯಲ್ಲೇ ಮುಳುಗಿರೋ ಕುಂಭಕರ್ಣ ನಾಯಕನ ಸುತ್ತ ಸುತ್ತೋ ಕಥೆಯೇ ‘ಜಂಟಲ್ ಮನ್’.
ಡೈನಮಿಕ್ ಪ್ರಿನ್ಸ್ ಹಾಗೂ ನಿಶ್ವಿಕಾ ನಾಯ್ಡು ಕಾಂಬಿನೇಷನ್ ನ ‘ಜಂಟಲ್ ಮನ್’ ಚಿತ್ರ ಈಗಾಗಲೇ ಮೇಮ್ಸ್,ಟ್ರೋಲ್ಸ್ ಪ್ರೇಜ್,ಕಾರ್ಟೂನ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.ಡಿಫರೆಂಟ್ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿರೋದು ಚಿತ್ರದ ಕ್ಯೂರಿಯಾಸಿಟಿಗೆ ಕಾರಣವಾಗಿದೆ.
ಅಪರೂಪದ ಸ್ಲೀಪಿಂಗ್ ಸಿಂಡ್ರೋಮ್ ನಿಂದ ಬಳಲುವ ನಾಯಕ 18 ಗಂಟೆ ನಿದ್ರೆ ಮಾಡಿದ್ರೆ,ಇನ್ನುಳಿದ ದಿನದ ಕೆಲವೇ ಕೆಲವು ಗಂಟೆಗಳಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋದನ್ನ ನಿರ್ದೇಶನ ಮಾಡಿದ್ದು ಜಡೇಶ್ ಕುಮಾರ್ ಹಂಪಿ. ಕೊಂಚ ಭಿನ್ನ ವೆನಿಸಿದ್ರೂ ಕ್ಯೂರಿಯಾಸಿಟಿ ಹೊತ್ತಿರೋ ‘ಜಂಟಲ್ ಮನ್’ ಇದೇ ಜನವರಿ 3 ನೇ ವಾರದಂದು ಪ್ರೇಕ್ಷಕ ಪ್ರಭುಗಳ ಮುಂದೆ ಹಾಜರಾಗ್ತಿದ್ದಾನೆ.ಇನ್ನೇನಿದ್ರು ಅವರ ಒಪ್ಪಿಗೆಯ ಅಪ್ಪುಗೆ ಮಾತ್ರ ಬ್ಯಾಲೇನ್ಸ್ ಆಗಿ ಉಳಿದಿದೆ ಅಷ್ಟೇ.