ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಕನ್ನಡದಲ್ಲಿ ಭರ್ಜರಿ ಹಿಟ್ ಆದ ಬಳಿಕ ತೆಲುಗಿನಲ್ಲೂ ಬಿಡುಗಡೆಯಾಗಿದೆ. ಈ ಸಿನಿಮಾಗೆ ತೆಲುಗು ಪ್ರೇಕ್ಷಕರು ಕೊಟ್ಟ ಪ್ರತಿಕ್ರಿಯೆ ನಿಜಕ್ಕೂ ರಕ್ಷಿತ್ ಶೆಟ್ಟಿ ಮೊಗದಲ್ಲಿ ನಗೆ ಅರಳಿಸಿದೆ.
ಅವನೇ ಶ್ರೀಮನ್ನಾರಾಯಣ ಸಿನಿಮಾ ತೆಲುಗಿನಲ್ಲಿ ಅತಡೇ ನಾರಾಯಣ ಎಂಬ ಟೈಟಲ್ ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಇದು ಸಾಮಾನ್ಯ ಸಿನಿಮಾಗಿಂತ ವ್ಯತ್ಯಸ್ಥವಾಗಿದೆ ಎಂದು ಹೊಗಳಿದ್ದಾರೆ.
ಸಾಮಾನ್ಯ ಸಿನಿಮಾಗಳಲ್ಲಿ ಹೀರೋ ಆಕಾಶದೆತ್ತರಕ್ಕೆ ವಿಲನ್ ಗಳನ್ನು ಹೊಡೆದು ಉರುಳಿಸುತ್ತಾನೆ. ಆದರೆ ಇಲ್ಲಿ ಅದಕ್ಕಿಂತ ಭಿನ್ನವಾಗಿ ಚಿತ್ರಿಸಲಾಗಿದೆ. ನಿಜಕ್ಕೂ ರಕ್ಷಿತ್ ಶೆಟ್ಟಿ ಮನರಂಜನೆ ಕೊಡುತ್ತಾರೆ. ತೆಲುಗಿನಲ್ಲೂ ಅವರಿಗೊಂದು ಮಾರ್ಕೆಟ್ ಸೃಷ್ಟಿಯಾಗೋದು ಖಂಡಿತಾ ಎಂದು ಟ್ವಿಟರಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ರಕ್ಷಿತ್ ಶೆಟ್ಟಿ ಮತ್ತು ಬಳಗ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗುತ್ತಿದೆ.