Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಹೊಸ ಲುಕ್‌ನಲ್ಲಿ ಬರಲಿದ್ದಾನೆ 'ಹುಚ್ಚಾ'

Huccha Cinema Re Release

Sampriya

ಬೆಂಗಳೂರು , ಶುಕ್ರವಾರ, 5 ಜುಲೈ 2024 (17:06 IST)
Photo Courtesy X
ಬೆಂಗಳೂರು:  ಕಿಚ್ಚ ಸುದೀಪ್ ಅವರ ಬಣ್ಣದ ಜೀವನದ ದಿಕ್ಕನ್ನೇ ಬದಲಾಯಿಸಿದ ಹುಚ್ಚ ಸಿನಿಮಾ ಇದೀಗ ತಾಂತ್ರಿಕ ಅಪ್‌ಡೇಟ್‌ನೊಂದಿಗೆ ಮರು ಬಿಡುಗಡೆಯಾಗಲಿದೆ.

2001ರಲ್ಲಿ ಬಿಡುಗಡೆಯಾದ ನಟ ಸುದೀಪ್ ಅಭಿನಯದ ಹುಚ್ಚ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿತು.  ಎನ್‌ ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಗೆ  ಸಿನಿ ರಸಿಕರು ಫುಲ್ ಮಾರ್ಕ್ಸ್ ನೀಡಿ ಮೆಚ್ಚಿಕೊಂಡಿದ್ದರು.

ಇನ್ನೂ ಈ ಸಿನಿಮಾ ಸುದೀಪ್ ಅವರ ಸಿನಿ ಪಯಣದಲ್ಲಿ ಹೊಸ ಭರವಸೆಯನ್ನು ತಂದುಕೊಟ್ಟ ಸಿನಿಮಾ. ಇದೀಗ ಈ ಸಿನಿಮಾ ಮತ್ತೇ ಪ್ರೇಕ್ಷಕರ ಮುಂದೆ ದೊಡ್ಡ ಪರದ ಮೇಲೆ ಬರಲಿದೆ. ಈ ಮೂಲಕ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ವಿಶೇಷ ಏನೆಂದರೆ ತಾಂತ್ರಿಕ ಅಪ್‌ಡೇಟ್‌ನೊಂದಿಗೆ ಸಿನಿಮಾವನ್ನು ರೀ ರಿಲೀಸ್ ಆಗಲಿದೆ.  

ಮೂಲ ನಿರ್ಮಾಪಕರ ಅನುಮತಿ ಪಡೆದು ಎ.ಎಂ.ಎಸ್‌ ಬ್ಯಾನರ್‌ನ ನಿರ್ಮಾಪಕ ಎಸ್‌.ಡಿ. ಮುನಿಸ್ವಾಮಿ ಅವರು ಅಪ್ಪು ಆರ್ಟ್ಸ್ ಮೂಲಕ ರೀ ರಿಲೀಸ್‌ ಮಾಡುತ್ತಿದ್ದಾರೆ.

ಮುನಿಸ್ವಾಮಿ ಅವರು ಈಗಾಗಲೇ 'ಕುಲ್ಫಿ' ನಿರ್ಮಿಸಿದ್ದು, 'ಲಂಕಾಸುರ' ಚಿತ್ರದ ನಿರ್ಮಾಣದಲ್ಲೂ ತೊಡಗಿದ್ದರು. ನೆಗೆಟಿವ್‌ನಿಂದ ಡಿಜಿಟಲ್‌ ಫಾರ್ಮೆಟ್‌ಗೆ ಚಿತ್ರವನ್ನು ಬದಲಿಸಲಾಗಿದ್ದು, ಜೊತೆಗೆ ಎಫೆಕ್ಟ್ ಡಿಟಿಎಸ್‌, ಡಿಐ ಸೇರಿದಂತೆ ಇಡೀ ಸಿನಿಮಾವನ್ನು ತಾಂತ್ರಿಕವಾಗಿ ಅಪ್‌ಡೇಟ್‌ ಮಾಡಲಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಸೂಟ್ ಗೇ ಕನ್ನ ಹಾಕಿದ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಇದೇನು ಮಾಡಿಬಿಟ್ಟರು