Webdunia - Bharat's app for daily news and videos

Install App

ನೋವಿನಲ್ಲಿರುವಾಗ ಸಂಭ್ರಮಿಸುವುದು ಸರಿಯಲ್ಲ: ಗೋಲ್ಡನ್ ಸ್ಟಾರ್ ಗಣೇಶ್

Webdunia
ಮಂಗಳವಾರ, 29 ಜೂನ್ 2021 (13:38 IST)
ಬೆಂಗಳೂರು: ನಟ ಗೋಲ್ಡನ್ ಸ್ಟಾರ್ ಗಣೇಶ್ ಗೆ ಜುಲೈ 2 ರಂದು ಜನ್ಮದಿನದ ಸಂಭ್ರಮ. ಆದರೆ ಈ ವರ್ಷವೂ ಅವರು ಬರ್ತ್ ಡೇ ಸಂಭ್ರಮಾಚರಿಸದೇ ಇರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದಾರೆ.


‘ನನಗೆ ಅರಿವಿದ್ದೋ, ಇಲ್ಲದೆಯೋ ಈ ಕೊವಿಡ್ ಕಾಲದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು. ಪ್ರತಿವರ್ಷ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿದ್ದೀರಿ. ಆದರೆ ಈ ಬಾರಿ ಕೊರೋನಾ ಮಹಾಮಾರಿಯಿಂದ ನನ್ನ ಹಲವು ಸಹೋದ್ಯೋಗಿಗಳು, ಆತ್ಮೀಯ ಗೆಳೆಯರು ಬಲಿಯಾಗಿದ್ದು ನೋವು ತರಿಸಿದೆ.

ಇಷ್ಟೆಲ್ಲಾ ನೋವುಗಳ ನಡುವೆ ಸಂಭ್ರಮಿಸೋದು ಸರಿಯಲ್ಲ ಎಂದೆನಿಸಿ ಜನ್ಮದಿನ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದೇನೆ. ಆ ದಿನ ನಾನು ಹೊರಾಂಗಣ ಚಿತ್ರೀಕರಣದಲ್ಲಿರುತ್ತೇನೆ. ನನಗಾಗಿ ಕೇಕ್, ಹಾರ ಎಂದು ಖರ್ಚು ಮಾಡದೇ ಆ ಹಣವನ್ನು ಕೊವಿಡ್ ಸಂಕಷ್ಟದಲ್ಲಿರುವ ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ’ ಎಂದು ಗಣೇಶ್ ಅಭಿಮಾನಿಗಳ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rape Case: ಮಡೆನೂರು ಮನು 31 ಚಾಟಿಂಗ್ ಡಿಟೇಲ್ಸ್ ಪಡೆದ ಖಾಕಿ, ಹಲವು ನಟ ನಟಿಯರಿಗೂ ಸಂಕಷ್ಟ

ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ: ಕಿಂಗ್ಸ್ ಸಹಮಾಲಕಿ ಮಾಡಿದ್ದೇನು ಗೊತ್ತಾ

DC vs PBKS, ಇಂತಹ ತಪ್ಪುಗಳು ಸ್ವೀಕಾರಾರ್ಹವಲ್ಲ: ಥರ್ಡ್‌ ಅಂಪೈರ್ ವಿರುದ್ಧ ಪ್ರೀತಿ ಜಿಂಟಾ ಆಕ್ರೋಶ, ಕಾರಣ ಇಲ್ಲಿದೆ

Darshan: ಫಾರ್ಮ್‌ಹೌಸ್‌ನಲ್ಲಿ ಗಂಡನ ಜತೆ ವಿಜಯಲಕ್ಷ್ಮಿ ಜಾಲಿರೈಡ್‌

Mysore Sandal Soap: ತಮನ್ನಾ ಭಾಟಿಯಾ ಆಯ್ಕೆ ಬಗ್ಗೆ ಸ್ಯಾಂಡಲ್‌ವುಡ್ ಕ್ವೀನ್ ಹೀಗೇ ಹೇಳೋದಾ

ಮುಂದಿನ ಸುದ್ದಿ
Show comments