Select Your Language

Notifications

webdunia
webdunia
webdunia
Thursday, 10 April 2025
webdunia

ರೂಂ ತುಂಬಾ ತರುಣ್ ಫೋಟೋವಿಟ್ಟು ಸೋನಾಲ್‌ಗೆ ಸರ್ಪ್ರೈಸ್ ಕೊಟ್ಟ ಗೆಳತಿಯರು

Sonal Tarun Marriage

Sampriya

ಬೆಂಗಳೂರು , ಮಂಗಳವಾರ, 6 ಆಗಸ್ಟ್ 2024 (18:46 IST)
Photo Courtesy X
ಬೆಂಗಳೂರು: ಇದೇ 11ರಂದು ತರುಣ್ ಸುಧೀರ್ ಅವರನ್ನು ಕೈಯಿಡಿಯಲಿರುವ ನಟಿ ಸೋನಾಲ್‌ಗೆ ಅವರ ಗೆಳತಿಯರು ಸರ್ಪ್ರೈಸ್ ಪಾರ್ಟಿ ಕೊಟ್ಟು ಶಾಕ್ ನೀಡಿದ್ದಾರೆ. ಇನ್ನೇ ನು ಮದುವೆಗೆ ನಾಲ್ಕು ದಿವಸವಿರುವಾಗ ಬ್ಯಾಚುಲರೇಟ್ ಪಾರ್ಟಿ ಆರೆಂಜ್ ಮಾಡಿದ ಗೆಳತಿಯರು  ರೂಂ ತುಂಬಾ ತರುಣ್ ಸುಧೀರ್ ಫೋಟೋವಿಟ್ಟು  ಸೋನಾಲ್‌ಗೆ ಸರ್ಪ್ರೈಸ್ ಮಾಡಿದ್ದಾರೆ. ತರುಣ್ ಸುಧೀರ್ ಫೋಟೋ ನೋಡಿದ ಸೋನಾಲ್ ಅವರು ನಾಚಿ ನೀರಾಗಿದ್ದಾರೆ.

ಈ ವೇಳೆ ಸೋನಾಲ್ ತನ್ನ ಗೆಳತಿಯರು ಹಾಗೂ ಕುಟುಂಬದವರ ಜತೆ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೋವನ್ನು ಸೋನಾಲ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ "ಸೋನು ನಾವು ಶುಕ್ರವಾರದಂದು ನಿಮ್ಮನ್ನು ಕರೆದುಕೊಂಡು ಹೋಗುತ್ತಿದ್ದೇವೆ ಮತ್ತು ಶನಿವಾರದಂದು ಬಿಡುತ್ತಿದ್ದೇವೆ" ಅಷ್ಟೇ !!! ತುಂಬಾ ಸುಂದರಗೊಳಿಸಿದ್ದಕ್ಕಾಗಿ ಮತ್ತು ನನ್ನನ್ನು ತುಂಬಾ ಭಾವನಾತ್ಮಕವಾಗಿಸಿದ್ದಕ್ಕಾಗಿ ಧನ್ಯವಾದಗಳು' ನನ್ನ ಜೀವನದಲ್ಲಿ ನಿಮ್ಮನ್ನು ಹೊಂದಲು ನಾನು ಅದೃಷ್ಟಶಾಲಿ
ಮತ್ತು ಇದು ಸಂಭವಿಸಿತು ಎಂದು ಸೋನಾಲ್ ಅವರು ಬರೆದುಕೊಂಡಿದ್ದಾರೆ.

ರಾಬರ್ಟ್‌ ಸೆಟ್‌ನಲ್ಲಿ ಶುರುವಾದ ಇವರ ಗೆಳೆತನ ನಂತರ ಪ್ರೀತಿಗೆ ತಿರುಗಿದೆ. ಈ ಜೋಡಿ ಎರಡು ವಾರಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಡೇಟ್‌ ಅನೌನ್ಸ್‌ ಮಾಡುವ ಮೂಲಕ ದೃಢಪಡಿಸಿತು.


Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಫ್ಯಾನ್ಸ್‌ ತಂದುಕೊಟ್ಟ ಫೋಟೋ ಇಟ್ಟು ಪೂಜೆ ಮಾಡಿದ ಅರ್ಚಕರಿಗೆ ಕಾದಿತ್ತು ಶಾಕಿಂಗ್ ನ್ಯೂಸ್