Webdunia - Bharat's app for daily news and videos

Install App

ಗೀತಾ: ಕನ್ನಡತನದ ಲಿರಿಕಲ್ ವೀಡಿಯೋ ಬಿಡುಗಡೆ!

Webdunia
ಶುಕ್ರವಾರ, 30 ಆಗಸ್ಟ್ 2019 (16:15 IST)
ಗೀತಾ ಎಂಬ ಚಿತ್ರ ಘೋಷಣೆಯಾದ ಬೆನ್ನಿಗೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿತ್ತಲ್ಲಾ? ಅದನ್ನು ನೋಡಿದಾಗಲೇ ಇದು ಹೊಸಾ ಬಗೆಯ ಕಥೆ ಹೊಂದಿರೋ ಸಿನಿಮಾ ಎಂಬ ಅಂದಾಜು ಸಿಕ್ಕಿ ಹೋಗಿತ್ತು. ಆ ನಂತರದಲ್ಲಿ ತೇಲಿ ಬಂದಿದ್ದ ಒಂದಷ್ಟು ವಿವರಗಳೂ ಕೂಡಾ ಅದಕ್ಕೆ ಪೂರಕವಾಗಿದ್ದವು. ಇದೀಗ ಇದರ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಮೂಲಕವೇ ಅಂಥಾ ಆರಂಭಿಕ ಅಂದಾಜುಗಳೆಲ್ಲವೂ ನಿಜವಾಗೋ ಭರವಸೆಯೂ ಮೂಡಿಕೊಂಡಿದೆ.
ಗೀತಾ ವಿಜಯ್ ನಾಗೇಂದ್ರ ನಿರ್ದೇಶನ ಮಾಡಿರುವ ಮೊದಲ ಚಿತ್ರ. ಈಗ ಬಿಡುಗಡೆಯಾಗಿರೋ ಈ ಹಾಡನ್ನು ನಿರ್ದೇಶಕ ಸಂತೋಷ್ ಆನಂದ್ರಾಮ್ ಬರೆದಿದ್ದಾರೆ. ನೊಬಿನ್ ಪೌಲ್ ಸಂಗೀತ ನೀಡಿರೋ ಈ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಧ್ವನಿಯಾಗಿದ್ದಾರೆ. ಇಷ್ಟೆಲ್ಲ ವಿಶೇಷತೆಗಳೊಂದಿಗೆ ಮೂಡಿ ಬಂದಿರೀ ಸದರಿ ಲಿರಿಕಲ್ ವೀಡಿಯೋ ಗೀತಾದ ಕಥೆ ಕೂಡಾ ವಿಶೇಷವಾಗಿಯೇ ಇದೆ ಎಂಬುದಕ್ಕೆ ಕನ್ನಡಿಯಂತೆ ಮೂಡಿ ಬಂದಿದೆ.
 
ಗೀತಾ ಒಂದು ರೊಮ್ಯಾಂಟಿಕ್ ಕಥೆ ಹೊಂದಿರೋ ಚಿತ್ರ. ಆದರಿಲ್ಲಿ ಗಣೇಶ್ ಕನ್ನಡ ಪರ ಹೋರಾಟಗಾರನಾಗಿಯೂ ಅಬ್ಬರಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಗೋಕಾಕ್ ಚಳವಳಿಯ ಘಟಕ್ಕುಗಳೂ ಕೂಡಾ ಬಿಚ್ಚಿಕೊಳ್ಳುತ್ತವೆ. ಇಷ್ಟು ವಿವರಗಳೇ ಕಥೆಯ ಬಗ್ಗೆ ಚಕಿತಗೊಳ್ಳುವಂತೆ ಮಾಡುತ್ತವೆ. ಆದರೆ ಅದಕ್ಕು ಮಿಗಿಲಾದ ದೃಷ್ಯಾವಳಿಗಳು ಗೀತಾ ಚಿತ್ರದಲ್ಲಿವೆಯಂತೆ. ಈ ಚಿತ್ರದಲ್ಲಿ ಗಣೇಶ್ ಅವರಿಗೆ ಮೂವರು ನಾಯಕಿಯರು ಜೊತೆಯಾಗಿದ್ದಾರೆ. ಎಲ್ಲ ಕೆಲಸ ಕಾರ್ಯ ಮುಗಿಸಿಕೊಂಡು ಲಿರಿಕಲ್ ವೀಡಿಯೋ ಮೂಲಕ ಕನ್ನಡತನದ ಕೆಚ್ಚು ಪಸರಿಸಿರೋ ಈ ಚಿತ್ರ ಬಿಡುಗಡೆಯ ಹಾದಿಯಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗೋಲ್ಡನ್ ಸ್ಟಾರ್ ಗಣೇಶ್ ಇನ್ನೊಂದು ಮುಖ ಪರಿಚಯಿಸಿದ ನಟಿ ರಂಜನಿ ರಾಘವನ್

ಯಶ್ ಒಬ್ಬ ನೋಡಿದ್ರೆ ನನ್ನ ಸಿನಿಮಾಗೆ ಹಾಕಿದ ಹಣ ಬರಲ್ಲ: ಅಮ್ಮ ಪುಷ್ಪಾ ಹೇಳಿಕೆ

ಅಮೆರಿಕಾದಲ್ಲಿ ಪತ್ನಿ ರಾಧಿಕಾರನ್ನು ಕಾಣುತ್ತಿದ್ದಂತೇ ಎತ್ತಿ ಮುದ್ದಾಡಿದ ಯಶ್

ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇ: ಪುನೀತ್ ಮಾಡಿದ ತ್ಯಾಗದಿಂದ ಸ್ಟಾರ್ ಆದ್ರು ಗಣೇಶ್

ನಟ ಮೋಹನ್ ಲಾಲ್ ಮಗಳು ಬೆಳ್ಳಿತೆರೆಗೆ ಪಾದಾರ್ಪಣೆ

ಮುಂದಿನ ಸುದ್ದಿ
Show comments