Select Your Language

Notifications

webdunia
webdunia
webdunia
webdunia

ಬಹುಕಾಲದ ಗೆಳತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಗೀತಾ' ಹೀರೋ ಧನುಷ್ ಗೌಡ

Dhanush

Sampriya

ಬೆಂಗಳೂರು , ಶನಿವಾರ, 27 ಏಪ್ರಿಲ್ 2024 (15:12 IST)
Photo Courtesy X
ಬೆಂಗಳೂರು:  ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಸೀರಿಯಲ್‌ ಮೂಲಕ ಜನಮನ್ನಣೆ ಗಳಿಸಿದ ನಟ ಧನುಷ್‌ ಗೌಡ  ಅವರು ಬಹುಕಾಲದ ಗೆಳತಿ ಸಂಜನಾ ಜತೆ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆ ಸಮಾರಂಭದಲ್ಲಿ ಎರಡು ಕುಟುಂಬದವರು ಹಾಗೂ ಸಿನಿಗಣ್ಯರು ಭಾಗವಹಿಸಿ ನವ ವಧು ವರನಿಗೆ ಹಾರೈಸಿದರು.

ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯಾ ಮದುವೆ ಫೋಟೋ ಹಾಗೂ ರೀಲ್ಸ್‌ಗಳು ವೈರಲ್ ಆಗಿದ್ದು, ನೆಚ್ಚಿನ ನಟನಿಗೆ ಎಲ್ಲರೂ ಶುಭಕೋರಿದ್ದಾರೆ.


ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಂಜನಾ ಮತ್ತು ಧನುಷ್‌ ಜೋಡಿಯ ಮದುವೆ ನೆರವೇರಿದೆ.

ಧನುಷ್ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ಭವ್ಯಾ ಗೌಡ ಸೇರಿದಂತೆ ಅನೇಕ ಮಂದಿ ಕಿರುತೆರೆ ಸೆಲೆಬ್ರಿಟಿಗಳು ಭಾಗವಹಿಸಿ ನವ ದಂಪತಿಗಳನ್ನು ಹಾರೈಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಲ್ಮಾನ್ ಮನೆ ಮೇಲೆ ಗುಂಡಿನ ದಾಳಿ: ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಜೌಟ್ ನೋಟಿಸ್