Select Your Language

Notifications

webdunia
webdunia
webdunia
webdunia

ರಾಜಕೀಯಕ್ಕಿಳಿದ ಕಮಲ್ ಹಾಸನ್ ಗೆ ಮಾಜಿ ಪ್ರೇಯಸಿ ಗೌತಮಿ ಕೊಟ್ಟ ಶಾಕ್!

ರಾಜಕೀಯಕ್ಕಿಳಿದ ಕಮಲ್ ಹಾಸನ್ ಗೆ ಮಾಜಿ ಪ್ರೇಯಸಿ ಗೌತಮಿ ಕೊಟ್ಟ ಶಾಕ್!
ಚೆನ್ನೈ , ಶುಕ್ರವಾರ, 2 ಮಾರ್ಚ್ 2018 (08:20 IST)
ಚೆನ್ನೈ: ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಹುಭಾಷಾ ತಾರೆ ಕಮಲ್ ಹಾಸನ್ ಗೆ ಅವರ ಮಾಜಿ ಗೆಳತಿ, ನಟಿ ಗೌತಮಿ ಹೊಸದೊಂದು ಆರೋಪ ಹೊರಿಸಿದ್ದಾರೆ.

13 ವರ್ಷಗಳ ಕಾಲ ಕಮಲ್ ಜತೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ ಗೌತಮಿ 2016 ರಲ್ಲಿ ಬೇರ್ಪಟ್ಟಿದ್ದರು. ಜತೆಯಾಗಿದ್ದಾಗ ಗೌತಮಿ, ಕಮಲ್ ಸಿನಿಮಾಗಳಿಗೆ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು.

ಅದೇ ಸಂದರ್ಭದಲ್ಲಿ ದುಡಿದ ಸಿನಿಮಾಗಳಿಗೆ ವೇತನ ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕಮಲ್ ಮೇಲೆ ಗೌತಮಿ ಆರೋಪ ಮಾಡಿದ್ದಾರೆ. ದಶಾವತಾರಂ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದಕ್ಕೆ ಸಂಪೂರ್ಣವಾಗಿ ತನಗೆ ಇನ್ನೂ ವೇತನ ಸಂದಾಯವಾಗಿಲ್ಲ. ಅಷ್ಟೇ ಅಲ್ಲ, ಕಮಲ್ ಜತೆಗಿದ್ದಾಗ ಬೇರೆ ಸಿನಿಮಾಗಳಿಗೂ ಕೆಲಸ ಮಾಡಲು ಬಿಡಲಿಲ್ಲ. ಇದೀಗ ನನಗೆ ಪುತ್ರಿಯನ್ನು ಆರ್ಥಿಕವಾಗಿ ಸದೃಢಗೊಳಿಸುವ ಗುರಿಯಿದೆ.

ಅದಕ್ಕಾಗಿ ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಹಾಗೆಯೇ ಕಮಲ್ ನನ್ನ ಬಾಕಿ ಹಣ ಪಾವತಿ ಮಾಡಬೇಕು ಎಂದು ಗೌತಮಿ ಆಗ್ರಹಿಸಿದ್ದಾರೆ. ಕಮಲ್ ಜತೆಗೆ ಮತ್ತೆ ಗೌತಮಿ ಒಂದಾಗುತ್ತಿದ್ದಾರೆ ಎಂಬ ಗಾಸಿಪ್ ಗಳ ಹಿನ್ನಲೆಯಲ್ಲಿ ಗೌತಮಿ ಈ ರೀತಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಅಲ್ಲದೇ, ತನಗೂ ಕಮಲ್ ಹಾಸನ್ ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾಬಾಲನ್ ನಟಿಸಿದ್ದ ಚಿತ್ರದಲ್ಲಿ ಈಗ ನಟಿ ಜ್ಯೋತಿಕಾ ಕಾಣಿಸಿಕೊಳ್ಳಲಿದ್ದಾರಂತೆ; ಆ ಚಿತ್ರ ಯಾವುದು ಗೊತ್ತಾ…?