Select Your Language

Notifications

webdunia
webdunia
webdunia
webdunia

ನಟ ಕಮಲ್ ಹಾಸನ್ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್; ಸಿನಿಮಾ ಜೀವನಕ್ಕೆ ವಿದಾಯ ಹೇಳಲಿದ್ದಾರಂತೆ ಕಮಲ್!

ನಟ ಕಮಲ್ ಹಾಸನ್ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್; ಸಿನಿಮಾ ಜೀವನಕ್ಕೆ ವಿದಾಯ ಹೇಳಲಿದ್ದಾರಂತೆ ಕಮಲ್!
ನವದೆಹಲಿ , ಶುಕ್ರವಾರ, 16 ಫೆಬ್ರವರಿ 2018 (06:45 IST)
ನವದೆಹಲಿ : 1959ರಲ್ಲಿ ಮೊದಲ ಬಾರಿಗೆ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟು, 1973ರಲ್ಲಿ ನಟನಾಗಿ ವೃತ್ತಿ ಆರಂಭಿಸಿದ್ದ ಖ್ಯಾತ ನಟ ಕಮಲ್‌ಹಾಸನ್‌ ಅವರು ಈಗಾಗಲೇ ರಾಜಕೀಯಕ್ಕೆ ಪ್ರವೇಶಿಸುವುದರ ಬಗ್ಗೆ ಘೋಷಣೆ ಮಾಡಿ, ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವುದರ ಕುರಿತು ಹೇಳಿದ್ದರು. ಆದರೆ ಈಗ ಅವರು ತಮ್ಮ ನಟನಾ ವೃತ್ತಿಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.


ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್‌ಹಾಸನ್‌ ಅವರು, ‘ತಮಿಳುನಾಡಿನ ಜನತೆಗಾಗಿ ನಾನು ರಾಜಕೀಯಕ್ಕೆ ಧುಮುಕಿದ್ದೇನೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈಗಾಗಲೇ ಒಪ್ಪಿಕೊಂಡಿರುವ ಎರಡು ಚಿತ್ರಗಳನ್ನು ಹೊರತುಪಡಿಸಿದರೆ ನನ್ನ ಪಾಲಿಗೆ ಇನ್ಯಾವುದೇ ಚಿತ್ರಗಳು ಇಲ್ಲ. ಕಳೆದ 37 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಕಾರ್ಯಗಳು ಚುನಾವಣೆಯಲ್ಲಿ ಕೈಹಿಡಿಯಲಿವೆ ಎಂಬ ವಿಶ್ವಾಸವಿದೆ. ಜನರಿಗಾಗಿಯೇ ಬದುಕಿದ್ದೇನೆ. ಅವರ ಸೇವೆ ಮಾಡುತ್ತಲೇ ಇಹಲೋಕ ತ್ಯಜಿಸುತ್ತೇನೆ. ಒಂದು ವೇಳೆ ರಾಜಕೀಯದಲ್ಲಿ ಯಶಸ್ವಿಯಾಗದೇ ಹೋದಲ್ಲಿ, ಬದುಕಲು ಯಾವುದಾದರೂ ಉತ್ತಮ ಮಾರ್ಗ ಕಂಡುಕೊಳ್ಳುತ್ತೇನೆ, ಆದರೆ ಸೋಲುವ ಭೀತಿ ನನಗಿಲ್ಲ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಂದನ್ ಶೆಟ್ಟಿ 3 ಪೆಗ್ ಸಾಂಗ್ ಹಿಂದೆ ಇನ್ನೊಬ್ಬ ವ್ಯಕ್ತಿಯ ಶ್ರಮವಿದೆಯಂತೆ; ಅದರ ಬಗ್ಗೆ ಯಾಕೆ ಚಂದನ್ ಶೆಟ್ಟಿ ಬಾಯಿಬಿಟ್ಟಿಲ್ಲ...?