Publish Date: Fri, 02 Mar 2018 (07:54 IST)
Updated Date: Fri, 02 Mar 2018 (07:59 IST)
ಚೆನ್ನೈ: ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ನಟಿಸಿದ ತುಮ್ಹಾರಿ ಸುಲು ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಈಗ ಈ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ನಿರ್ದೇಶಕ ರಾಧಾಮೋಹನ್ ಸಜ್ಜಾಗಿದ್ದಾರೆ. ಅಂದಹಾಗೇ, ವಿದ್ಯಾಬಾಲನ್ ನಟಿಸಿದ್ದ ಪಾತ್ರದಲ್ಲಿ ಜ್ಯೋತಿಕಾ ಕಾಣಿಸಿಕೊಳ್ಳುತ್ತಿದ್ದಾರೆ.
ಮೇ ತಿಂಗಳಿನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆಯಂತೆ. ಈಗಾಗಲೇ ರಾಧಾ ಮೋಹನ್ ಈ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
‘ನಾನು ವಿದ್ಯಾಬಾಲನ್ ಅವರ ದೊಡ್ಡ ಫ್ಯಾನ್ ಆಗಿದ್ದು, ಹಿಂದಿಯಲ್ಲಿ ಅವರು ಮಾತನಾಡುವುದನ್ನು ಕೇಳಲು ನನಗೆ ಖುಷಿಯಾಗುತ್ತದೆ. ವಿದ್ಯಾಬಾಲನ್ ಅವರ ಎಲ್ಲ ಚಿತ್ರಗಳನ್ನು ನಾನು ನೋಡಿದ್ದು, ತುಮ್ಹಾರಿ ಸುಲು ನನ್ನ ಮೆಚ್ಚಿನ ಚಿತ್ರವಾಗಿದೆ, ಹಾಗಾಗಿ ರಾಧಾಮೋಹನ್ ಕೇಳಿದ ತಕ್ಷಣ ನಾನು ಒಪ್ಪಿಕೊಂಡಿದ್ದೇನೆ,' ಎನ್ನುತ್ತಾರೆ ಜ್ಯೋತಿಕಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ