Select Your Language

Notifications

webdunia
webdunia
webdunia
webdunia

10ನಿಮಿಷದ ಡ್ಯಾನ್ಸ್ ಕಲಿಸಲು ಬರೋಬ್ಬರಿ 5 ಲಕ್ಷ ಬೇಡಿಕೆಯಿಟ್ಟ 'ಗಜ' ನಟಿ, ಕೇರಳ ಸಚಿವರ ಆರೋಪವೇನು

Malyalam Actress Navya Nair Controvercy, Kerala General Education Minister V Sivankutty, 5 Minutes Dancem

Sampriya

ತಿರುವನಂತಪುರ , ಸೋಮವಾರ, 9 ಡಿಸೆಂಬರ್ 2024 (15:24 IST)
Photo Courtesy X
ತಿರುವನಂತಪುರಂ: ಕನ್ನಡದ ಗಜ, ದೃಶ್ಯಂ ಸಿನಿಮಾದಲ್ಲಿ ನಟಿಸಿದ , ಮಲಯಾಳಂನ ಖ್ಯಾತ ನಟಿ ನವ್ಯಾ ನಾಯರ್ ವಿರುದ್ಧ ಕೇರಳದ ಶಿಕ್ಷಣ ಸಚಿವ ವಿ ಶಿವನ್ ಕುಟ್ಟಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಮುಂಬರುವ ರಾಜ್ಯ ಶಾಲಾ ಯುವಜನೋತ್ಸವದದಲ್ಲಿ 10ನಿಮಿಷದ ಸ್ವಾಗತ ನೃತ್ಯಕ್ಕೆ ಕೊರಿಯೋಗ್ರಫಿ ಮಾಡಲು ನಟಿ ಬರೋಬ್ಬರಿ ಐದು ಲಕ್ಷ ರೂಪಾಯಿ ಬೇಡಿಕೆಯಿಟ್ಟಿರುವುದಕ್ಕೆ ಶಿವನ್ ಕುಟ್ಟಿ ಅವರು ಅಸಮಾಧಾನ ಹೊರಹಾಕಿದ್ದಾರೆ.

ನಟಿಯ ಹೆಸರನ್ನು ಉಲ್ಲೇಖಿಸಲು ಇಚ್ಛಿಸದ ಅವರು, ಮಕ್ಕಳಿಗೆ 10 ನಿಮಿಷಗಳ ನೃತ್ಯ ಕಲಿಸಲು  ಮಲಯಾಳಂನ ಖ್ಯಾತ ನಟಿ ಭಾರಿ ಮೊತ್ತವನ್ನು ಕೇಳಿದರು.ಇದನ್ನು ದುರಾಸೆ ಮತ್ತು ದುರಹಂಕಾರ ಎಂದು ಬಣ್ಣಿಸಿದ ಅವರು, ಯುವಜನೋತ್ಸವದ ಮೂಲಕ ಇಂತಹವರು ಖ್ಯಾತಿ ಗಳಿಸಿದ್ದರೂ ತಮ್ಮ ಬೇರುಗಳನ್ನು ಮರೆತು ಬಿಟ್ಟಿದ್ದಾರೆ ಎಂದರು.

ಹೀಗಾಗಿ ನಟಿಯನ್ನು ಹೊರಗಿಡಲು ಮತ್ತು ಅದಕ್ಕಾಗಿ ಮೀಸಲಾದ ಕಲಾವಿದರನ್ನು ಆಯ್ಕೆ ಮಾಡಲು ಇಲಾಖೆ ನಿರ್ಧರಿಸಿದೆ ಎಂದು ಶಿವನ್‌ಕುಟ್ಟಿ ಹೇಳಿದರು. ನಾನು ನಟಿಯ ಹೆಸರನ್ನು ಹೇಳುತ್ತಿಲ್ಲ.. ಹಾಗೆ ಮಾಡಿದರೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ" ಎಂದು ಅವರು ಹೇಳಿದರು.

ಇನ್ನೂ ಈ ಸಂದರ್ಭದಲ್ಲಿ ಕಳೆದ ಬಾರಿ ಖ್ಯಾತ ನಟ ಫಹಾದ್ ಫಾಜಿಲ್ ಅವರು ಓಣಂ ಆಚರಣೆಗೆ  ಆಹ್ವಾನಿಸಲಾಯಿತು. ವಿಮಾನದಲ್ಲಿ ಬಂದ ನಟ ಯಾವುದೇ ಸಂಭಾವನೆ ಇಲ್ಲದೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು ಮತ್ತು ಸಮಯಕ್ಕೆ ತಲುಪಿದರು ಎಂದು ಅವರು ನಟನ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾವಿರಾರು ಮಕ್ಕಳು ಭಾಗವಹಿಸುವ ರಾಜ್ಯ ಯುವಜನೋತ್ಸವವನ್ನು ಮುಂದಿನ ವರ್ಷ ಜನವರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ: ನಟಿ ಹರಿಪ್ರಿಯಾ ಪೋಸ್ಟ್‌