ಹೈದರಾಬಾದ್: ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಪುಷ್ಪಾ 2 ಸಿನಿಮಾ ನಾಲ್ಕು ದಿನಗಳಲ್ಲಿ ₹750 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ.
ಇದೀಗ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಚಿತ್ರತಂಡ ಖುಷಿಯ ಸುದ್ದಿ ನೀಡಿದೆ. ಪುಷ್ಪಾ 2 ಟಿಕೆಟ್ ದರ ಇಳಿಕೆಯಾಗಿದ್ದು, ಕ್ರೇಜಿ ಫ್ಯಾನ್ಸ್ ಮತ್ತೊಮ್ಮೆ ಸಿನಿಮಾ ವೀಕ್ಷಿಸಬಹುದು.
ಇದೇ ತಿಂಗಳು 5ರಂದು ವಿಶ್ವಾದ್ಯಂತ ಬಿಡುಗಡೆಯಾದ ಪುಷ್ಪಾ 2 ಚಿತ್ರ ನಾಲ್ಕು ದಿನಗಳಲ್ಲಿ 750 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದೇ ಸಂಭ್ರಮದಲ್ಲಿರುವ ನಿರ್ಮಾಪಕರು ಚಿತ್ರದ ಟಿಕೆಟ್ ದರವನ್ನು ಕಡಿಮೆ ಮಾಡಲಾಗುತ್ತಿದೆ ಎಂದಿದ್ದಾರೆ.
ಬಿಡುಗಡೆಯಾದ ಒಂದು ವಾರದವರೆಗೆ ಟಿಕೆಟ್ ದರವನ್ನು ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಅಂದರೆ ಡಿ.9 ರಿಂದ 16 ರವರೆಗೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ₹ 105, ಮಲ್ಟಿಪ್ಲೆಕ್ಸ್ ₹ 150 ಟಿಕೆಟ್ ದರ ಹೆಚ್ಚಿಸಿ ಬಿಡುಗಡೆ ಮಾಡಲಾಗಿತ್ತು.
ಆದರೆ ಇದೀಗ ಟಿಕೆಟ್ ದರ ಇಳಿಕೆ ಮಾಡಿರುವುದು ಅಭಿಮಾನಿಗಳಿಗೆ ಮಾತ್ರವಲ್ಲ ನಿರ್ಮಾಪಕರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಎಂಬ ಮಾತು ಕೇಳಿ ಬರುತ್ತಿದೆ.