ಮೊದಲ ಮಗುವಿನ ಆಗಮನದ ಖುಷಿಯಲ್ಲಿರುವ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ ಎಂದು ನಟಿ ಬರೆದುಕೊಂಡಿದ್ದಾರೆ.
 
									
			
			 
 			
 
 			
					
			        							
								
																	ಅದನ್ನು ನೋಡಿದ ಅವರ ಅಭಿಮಾನಿಗಳು, ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಫೋಟೋದಲ್ಲಿ ಅಮ್ಮನ ಮಡಿಲಲ್ಲಿ ಹರಿಪ್ರಿಯಾ ನಿದ್ದೆ ಮಾಡುತ್ತಿರುವುದನ್ನು ಕಾಣಬಹುದು. ಈ ಫೋಟೋದ ಮೂಲಕ ಹರಿಪ್ರಿಯಾ ತಮ್ಮ ಮಗು ಹಾಗೂ ಅಮ್ಮನ ಮೇಲಿನ ಮಮತೆಯನ್ನು ಹಂಚಿಕೊಂಡಿದ್ದಾರೆ.
									
										
								
																	ಹಲವು ವರ್ಷಗಳ ಕಾಲ ಪ್ರೀತಿ ಮಾಡಿದ ಈ ಜೋಡಿ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ನವೆಂಬರ್ 1ರಂದು ವಸಿಷ್ಠ ಸಿಂಹ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ರಿವೀಲ್ ಮಾಡಿದ್ದರು.
									
											
							                     
							
							
			        							
								
																	ಹರಿಪ್ರಿಯಾ ಅವರು ಮದುವೆ ನಂತರ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ.