ಹೈದರಾಬಾದ್ : ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಾಡುನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಿರ್ಮಾಪಕ ಮಿರಿಯಾಲ ರವೀಂದರ್ ರೆಡ್ಡಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂಬುದಾಗಿ ತಿಳಿದುಬಂದಿದೆ.
ನಿರ್ಮಾಪಕ ರವೀಂದರ್ ರೆಡ್ಡಿ ಅವರು ಸಹಸಮ್ ಸ್ವಸಾಗ ಸಾಗಿಪೋ ಚಿತ್ರಕ್ಕಾಗಿ ಯುಎಸ್ ಮೂಲದ ವಿತರಕರಿಂದ 50ಲಕ್ಷ ರೂ. ಮುಂಗಡ ಹಣವನ್ನು ತೆಗೆದುಕೊಂಡಿದ್ದರು. ಆದರೆ ಒಪ್ಪಂದವನ್ನು ಸರಿಯಾಗಿ ನಿಭಾಯಿಸದೆ ಹಕ್ಕುಗಳನ್ನು ಇನ್ನೊಬ್ಬ ವಿತರಕರಿಗೆ ಮಾರಾಟ ಮಾಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಕೋರ್ಟ್ ನಿರ್ಮಾಪಕ ಮಿರಿಯಾಲ ರವೀಂದರ್ ರೆಡ್ಡಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಮತ್ತು ಏಪ್ರಿಲ್ 19, 2021ರಂದು ನ್ಯಾಯಾಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.