Webdunia - Bharat's app for daily news and videos

Install App

ಅಕ್ಟೋಬರ್ ತಿಂಗಳ ಈ ವಾರದಲ್ಲಿ ನಿಮ್ಮ ಮುಂದೆ ಬಿಗ್ ಬಾಸ್

Webdunia
ಶನಿವಾರ, 24 ಸೆಪ್ಟಂಬರ್ 2016 (12:04 IST)
ಕಿಚ್ಚಾ ಸುದೀಪ್ ನಡೆಸಿಕೊಡುವ 'ಬಿಗ್ ಬಾಸ್' ಕಾರ್ಯಕ್ರಮದ ನಾಲ್ಕನೆಯ ಆವೃತ್ತಿ ಅಕ್ಟೋಬರ್ ಎರಡನೆಯ ವಾರದಿಂದ ಪ್ರಾರಂಭವಾಗುತ್ತಿದೆ. 


 
ಸದ್ಯದಲ್ಲಿಯೇ ಬಿಗ್ ಬಾಸ್ ಪ್ರಾರಂಭವಾಗಲಿದೆ ಎಂದು ಕಲರ್ಸ್ ವಾಹಿನಿ ಹೇಳುತ್ತಲೇ ಬಂದಿತ್ತು. ಆದರೆ ದಿನಾಂಕವನ್ನು ಖಚಿತ ಪಡಿಸಿರಲಿಲ್ಲ. ಮತ್ತೀಗ ಅಕ್ಟೋಬರ್ ಎರಡನೆಯ ವಾರ ಬಿಗ್ ಬಾಸ್ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ.  
 
ಕಳೆದ ಬಾರಿ ಹಿರಿಯ ನಟಿ ಶೃತಿ, ಪತ್ರಕರ್ತ ರೆಹಮಾನ್, ಮಾಸ್ಟರ್ ಆನಂದ್, ಚಂದನ್,  ಕೃತಿಕಾ ರವೀಂದ್ರ, ಹುಚ್ಚ ವೆಂಕಟ್, ಭಾವನಾ ಬೆಳಗರೆ ಮುಂತಾದ ಪ್ರತಿಷ್ಠಿತರ ಕಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕೊನೆಗೆ ಶೃತಿ ವಿಜೇತೆ ಎನ್ನಿಸಿಕೊಂಡಿದ್ದರು. 
 
ಈ ಹಿಂದೆ ಬಿಗ್ ಬಾಸ್ ಸೀಸನ್ -3 ನಡೆದ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲೇ ಈ ಬಾರಿಯ ಸೀಸನ್ -4 ಗೂ ಕೂಡ ಬಿಗ್ ಬಾಸ್ ಮನೆ ನಿರ್ಮಾಣವಾಗಲಿದೆಯಂತೆ. ಇನ್ನು ಈ ಹಿಂದೆ ಕಾರ್ಯಕ್ರಮವನ್ನು ಕಿಚ್ಚ ನಿರೂಪಣೆ ಮಾಡಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದ್ರೀಗ ಸುದೀಪ್ ಅವರೇ ಮಾಡಲಿದ್ದಾರೆ ಎನ್ನಲಾಗುತ್ತಿದೆ.
 
ಕಾರ್ಯಕ್ರಮದ ನಿರೂಪಣೆಗೆ ಕಿಚ್ಚ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.ಅಲ್ಲದೇ ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಾರೆ ಅನ್ನೋ ಬಗ್ಗೆಯೂ ಮಾಹಿತಿಯನ್ನು ಸಹ ಕಲರ್ಸ್ ಗುಟ್ಟಾಗಿಟ್ಟಿದೆ. ಆದ್ರೆ ಒಂದಷ್ಟು ಸ್ಪೆಷಲ್ ವ್ಯಕ್ತಿಗಳು ಈ ಬಾರಿ ಮನೆಯೊಳಕ್ಕೆ ಕಾಲಿಡೋದು ಖಚಿತ ಎನ್ನುತ್ತಿವೆ ಮೂಲಗಳು.
 
ಒಟ್ಟು 14 ಸ್ಪರ್ಧಿಗಳು ಪಾಲ್ಗೊಳ್ಳುವ ಸಾಧ್ಯತೆಗಳಿದ್ದು ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ, ಲೂಸ್ ಮಾದ ಯೋಗೀಶ್, ಹಾಸ್ಯ ನಟ ಕೋಮಲ್, ನವೀನ್ ಕೃಷ್ಣ, ಹಿರಿಯ ನಟಿ ಸುಧಾರಾಣಿ, ಅನು ಪ್ರಭಾಕರ್, ಪ್ರಿಯಾ ಹಾಸನ್,ತಾರಾ, ಗಾನಾ ಬಜಾನಾ ತರುಣ್, ಅರುಣ್ ಅರ್ಚನಾ, ತಿಥಿ ಸಿನಿಮಾದ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ, ಗಡ್ಡಪ್ಪ ಮತ್ತು ಸಾಮಾಜಿಕ ವಿಮರ್ಶಕ ಕಿರಿಕ್ ಕೀರ್ತಿ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ ಎಂದು ಕೆಲ ದಿನಗಳ ಹಿಂದೆ ಸುದ್ದಿ ವದಂತಿ ಹರಿದಾಡುತ್ತಿತ್ತು. ಇದೆಷ್ಟು ಸತ್ಯ, ಸುಳ್ಳೆಂಬುದು ಖಚಿತವಾಗಿಲ್ಲ. ಆದರೆ ತಮಗೆ ಬಿಗ್ ಬಾಸ್‌ನಲ್ಲಿ ಪಾಲ್ಗೊಳ್ಳಲು ಇಷ್ಟವಿಲ್ಲ. ಈ ಕುರಿತು ನನಗೆ ಆಹ್ವಾನವೂ ಬಂದಿಲ್ಲ. ಬಂದರೂ ಒಪ್ಪಿಕೊಳ್ಳಲಾರೆ ಎಂದು ಕಾಮಿಡಿ ಕಿಂಗ್ ಕೋಮಲ್ ಸ್ಪಷ್ಟ ಪಡಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments