2016-17ನೇ ಸಾಲಿನ ಬಹುನಿರೀಕ್ಷಿತ ರಣಜಿ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 6 ರಿಂದ ಆರಂಭವಾಗಲಿದ್ದು ಕರ್ನಾಟಕ ತಂಡ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ.
'ಎ' ಮತ್ತು 'ಬಿ' ಮತ್ತು 'ಸಿ' ಗುಂಪಿನಲ್ಲಿ ತಲಾ 9 ತಂಡಗಳು ಇರಲಿದ್ದು, ಕರ್ನಾಟಕ ಪ್ರತಿನಿಧಿಸುವ 'ಬಿ' ಗುಂಪಿನಲ್ಲಿ ಒಡಿಶಾ, ಆಸ್ಸಾಂ, ವಿದರ್ಭ, ಸೌರಾಷ್ಟ್ರ, ಜಾರ್ಖಂಡ್, ದೆಹಲಿ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳು ಸ್ಥಾನ ಪಡೆದಿವೆ.
'ಎ' ಗುಂಪಿನಲ್ಲಿ ಹಾಲಿ ಚಾಂಪಿಯನ್ ಮುಂಬೈ, ಗುಜರಾತ್, ತಮಿಳುನಾಡು, ರೈಲ್ವೆಸ್, ಉತ್ತರ ಪ್ರದೇಶ್, ಬರೋಡ, ಪಂಜಾಬ್, ಮಧ್ಯಪ್ರದೇಶ್, ಬಂಗಾಳ್ ತಂಡಗಳಿವೆ.
'ಸಿ' ಗುಂಪಿನಲ್ಲಿ ಮೊದಲ ಬಾರಿಗೆ ರಣಜಿ ಆಡಲು ಅವಕಾಶ ಪಡೆದಿರುವ ಛತ್ತೀಸಗಡ ಆಂಧ್ರ, ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್, ಹರಿಯಾಣ, ಕೇರಳ, ಹಿಮಾಚಲ ಪ್ರದೇಶ್, ತ್ರಿಪುರ, ಸರ್ವಿಸಸ್, ಗೋವಾ ತಂಡಗಳು ಸ್ಥಾನ ಪಡೆದಿವೆ.
2017 ರಿಂದ ಜನೇವರಿ 7 ರಿಂದ 11ರವರೆಗೆ ಫೈನಲ್ ಪಂದ್ಯ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .