Select Your Language

Notifications

webdunia
webdunia
webdunia
webdunia

ಮಂದನಾ ಕರಿಮಿ ಸದ್ಯಕ್ಕೆ ಮದುವೆಯಾಗ್ತಿಲ್ಲ!!

ಮಂದನಾ ಕರಿಮಿ ಸದ್ಯಕ್ಕೆ ಮದುವೆಯಾಗ್ತಿಲ್ಲ!!
ಮುಂಬೈ , ಬುಧವಾರ, 18 ಮೇ 2016 (11:53 IST)
'ಕ್ಯಾ ಕೂಲ್ ಹೇ ಹಮ್' ಚಿತ್ರದ ನಟಿ ಮಂದನಾ ಕರಿಮಿ ತಮ್ಮ ಮದುವೆ ಬಗ್ಗೆ ಹರಡಿದ್ದ ವದಂತಿ ಬಗ್ಗೆ ಅಸಮಾಧಾನ ವ್ಯಕ್ತಪಟಿಸಿದ್ದಾರೆ. ಸದ್ಯಕ್ಕೆ ತಾವು ಮದುವೆಯಾಗ್ತಿಲ್ಲ ಎಂದು ಹೇಳಿದ್ದಾರೆ. 
ಈ ವರ್ಷಕ್ಕೆ ಮಂದನಾ ಮದುವೆಯಾಗಲಿದ್ದಾರೆ ಎಂದು ಹೇಳಲಾಗ್ತಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮಂದನಾ, ಈ ವರ್ಷಾಂತ್ಯಕ್ಕೆ ನಾನು ಮದುವೆಯಾಗ್ತಿಲ್ಲ, ನನ್ನ ರಿಲೇಷನ್‌ಶಿಪ್ ಕುರಿತು ಎಂದು ಅಲ್ಲೆಗಳೆದಿಲ್ಲ. ಸದ್ಯಕ್ಕಂತೂ ನಾನು ಮದುವೆಯಾಗುವುದರ ಬಗ್ಗೆ ಯೋಚನೆ ಮಾಡಿಲ್ಲ. ಮೊದಲು ನಾನು ಕೆಲಸಕ್ಕೆ ಪ್ರಾಶಸ್ತ್ಯ ನೀಡುತ್ತೇನೆ ಎಂದು ಮಂದನಾ ಹೇಳಿದ್ದಾಳೆ. 
 
ಬಿಗ್ ಬಾಸ್ ಸೀಸನ್ -9ರ ಸ್ಪರ್ಧಿ, ನಟಿ ಮಂದನಾ ಕರಿಮಿ ಶೀಫ್ರದಲ್ಲೇ ಮದುವೆಯಾಗಲಿದ್ದಾರಂತೆ ಎಂಬ ಬಗ್ಗೆ ವದಂತಿ ಹರಡಿತ್ತು. ಈಗಾಗ್ಲೇ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಂದನಾ, ಬಿಗ್ ಬಾಸ್ ಸೀಸನ್-9ರಲ್ಲಿ ಪ್ರಬಲ ಸ್ಪರ್ಧಿ ಅಂತಲೇ ಬಿಂಬಿತವಾಗಿದ್ದರು. 
 
ಈ ಮೊದಲು ಮಂದನಾ ಕರಿಮಿ ಮಾಡೆಲ್ ಲಲಿತ್ ಎಂಬಾತರ ಜತೆ ಮದುವೆಯಾಗಿದ್ದರು. ಅಲ್ಲದೇ ಖ್ಯಾತ ಡಿಸೈನರ್ ರೋಹಿತ್ ಜತೆಗೂ ಹೆಸರು ಕೇಳಿ ಬಂದಿತ್ತು. ಅದಾದ ಬಳಿಕ ಮಂದನಾ ರಾಜಕಾರಣಿ ಅಜಿತ್ ಪವರ್ ಅವರ ಪುತ್ರನ ಜತೆಗೂ ಮಂದನಾ ಹೆಸರು ಕೇಳಿ ಬಂದಿತ್ತು. ಆದ್ರೆ ಈಗ ಮಂದನಾ ಹೊಸ ಬಾಯ್‌ಫ್ರೆಂಡ್ ಗೌರವ್ ಜತೆ ಮಂದನಾ ರಿಲೇಷನ್‌ಶಿಪ್‌ನಲ್ಲಿದ್ದಾರಂತೆ. 
 
ಅಲ್ಲದೇ ಮಂದನಾ ಕರಿಮಿ ಈಗಾಗ್ಲೇ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದಾರೆ. ಅದಕ್ಕಾಗಿ ಮಂದನಾ ತಮ್ಮ ಮತ್ತೊಂದು ಮದುವೆ ಬಗ್ಗೆ ಸದ್ಯಕ್ಕಂತು ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯ ಇವೆರೆಡು ಜೋಡಿಗಳು ಜಪಾನ್‌ನಲ್ಲಿ ಒಟ್ಟಿಗೆ ಇದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್‌ 27ಕ್ಕೆ ಸಲ್ಮಾನ್ ಖಾನ್ ಮದುವೆ?