Select Your Language

Notifications

webdunia
webdunia
webdunia
webdunia

ಡಿಸೆಂಬರ್‌ 27ಕ್ಕೆ ಸಲ್ಮಾನ್ ಖಾನ್ ಮದುವೆ?

ಡಿಸೆಂಬರ್‌ 27ಕ್ಕೆ ಸಲ್ಮಾನ್ ಖಾನ್  ಮದುವೆ?
ಮುಂಬೈ , ಬುಧವಾರ, 18 ಮೇ 2016 (11:50 IST)
ಬಾಲಿವುಡ್‌ನ ಮೋಸ್ಟ್ ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ರೋಮಾನಿಯಾ ಗರ್ಲ್‌ಫ್ರೆಂಡ್ ಜತೆಗೆ ಡಿಸೆಂಬರ್ 27ಕ್ಕೆ ಮದುವೆಯಾಗಲಿದ್ದಾರಂತೆ. ಕೆಲ ಮೂಲಗಳ ಪ್ರಕಾರ ಸಲ್ಮಾನ್ ತಾಯಿ ಸಲ್ಲು ಅವರನ್ನು ಆದಷ್ಟು ಬೇಗ ಮದುವೆಯಾಗಲು ಬಯಸುತ್ತಿದ್ದಾರೆ ಎನ್ನಲಾಗಿತ್ತು. ಆದ್ದರಿಂದ ಸಲ್ಮಾನ್ ಡಿಸೆಂಬರ್ 27ಕ್ಕೆ ಸಪ್ತಪದಿ ತುಳಿಯಲಿದ್ದಾರೆ.  
ಮೊನ್ನೆಯಷ್ಟೆ ಸಲ್ಮಾನ್ ಅಮ್ಮನ ಮಾತು ಕೇಳಿ ಸಲ್ಮಾನ್ ಆದಷ್ಟು ಬೇಗ ಗುಡ್ ನ್ಯೂಸ್ ನೀಡುತ್ತಾರೆ ಎಂದು ಹೇಳಲಾಗುತ್ತಿತ್ತು. ಅದಲ್ಲದೇ ಮೊನ್ನೆ ನಡೆದಿದ್ದ ಪ್ರೀತಿ ಜಿಂಟಾ ರಿಶಪ್ಳನ್ ವೇಳೆ ಸಲ್ಮಾನ್ ತನ್ನ ಗೆಳತಿ ಲೂಲಿಯಾ ಜತೆಗೆ ಪಾರ್ಟಿಗೆ ಬಂದಿದ್ದರು. ಆದ್ದರಿಂದ ಸಲ್ಮಾನ್ ಲೂಲಿಯಾ ಜತೆಗೆ ಮದುವೆಯಾಗೋದು ಖಚಿತವಾಗಿತ್ತು. 
 
ಈ ಹಿನ್ನೆಲೆಯಲ್ಲಿ ಸಲ್ಮಾನ್ ಇದೇ ವರ್ಷಕ್ಕೆ ತಾವು ಮದುವೆಯಾಗುವ ಬಗ್ಗೆ ಪ್ಯ್ಲಾನ್‌ನಲ್ಲಿದ್ದಾರೆ. ಅದಕ್ಕಾಗಿ ಅವರು ಡಿಸೆಂಬರ್ 27ಕ್ಕೆ ಮದುವೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.  
 
ಆದರೆ ಸಲ್ಮಾನ್ ಪ್ರೋಫೆಶನಲ್ ಜೀವನ ನೋಡಿದ್ರೆ ಸಲ್ಮಾನ್ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ... ಇನ್ನೂ ಸಲ್ಮಾನ್ ಮುಂಬರುವ ಚಿತ್ರ  ಸುಲ್ತಾನ್ ತೆರೆಗೆ ಬರಲು ಸಜ್ಜಾಗಿದೆ.
 
ಇನ್ನೂ ಸಲ್ಲು ಅಭಿನಯದ 'ಸುಲ್ತಾನ್' ಚಿತ್ರವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕುಸ್ತಿಪಟು ಪಾತ್ರಕ್ಕಾಗಿ ಸಲ್ಮಾನ್ ಸಾಕಷ್ಟು ತರಬೇತಿ ಪಡೆಯುತ್ತಿದ್ದಾರಂತೆ. ಯಶ್‌ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಸುಲ್ತಾನ್ ಚಿತ್ರದಲ್ಲಿ ಅನುಶ್ಕಾ ಶರ್ಮಾ ಸೇರಿದಂತೆ ಹಲವರು ಇದ್ದಾರೆ. ಈದ್ ಹಬ್ಬದಂದು ಚಿತ್ರ ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯೂಟರ್ನ್ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್