Select Your Language

Notifications

webdunia
webdunia
webdunia
webdunia

ಯೂಟರ್ನ್ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್

ಯೂಟರ್ನ್ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್
ಬೆಂಗಳೂರು , ಬುಧವಾರ, 18 ಮೇ 2016 (11:29 IST)
ಒಂದು ಕಡೆ ಥಿಯೇಟರ್ ಸಮಸ್ಯೆಯಿಂದಾಗಿ ನೊಂದು ಹೋಗಿದ್ರು ಯು ಟರ್ನ್ ಸಿನಿಮಾ ತಂಡದ ಖುಷಿ ಮಾತ್ರ ಕಡಿಮೆಯಾಗಿಲ್ಲ. ರಿಲೀಸ್ ಗೂ ಮುನ್ನವೇ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರೋದರಿಂದ ಸಿನಿಮಾ ತಂಡ ಇದೀಗ ಫುಲ್ ಖುಷಿಯಾಗಿದೆ. ನ್ಯೂಯಾರ್ಕ್ ನಲ್ಲಿ ನಡೆದ ಸಿನಿಮಾದ ಪ್ರೀಮಿಯರ್ ಶೋ ನೋಡಿದ ಜನ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.
ಇತ್ತೀಚೆಗೆ ನ್ಯೂಯಾರ್ಕ್ ನಲ್ಲಿ ಯೂ ಟರ್ನ್ ಚಿತ್ರದ ಪ್ರೀಮಿಯರ್ ಶೋ ನಡೆದಿತ್ತು, ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರಂತೆ. 
 
ಇನ್ನು ಈಗಾಗಲೇ ಸಿನಿಮಾವನ್ನು ವೀಕ್ಷಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ನಾನು ಈ ಸಿನಿಮಾವನ್ನು ತಮಿಳು ಹಾಗೂ ತೆಲುಗಿನಲ್ಲಿ ಯಾರಾದ್ರೂ ರಿಮೇಕ್ ಮಾಡಿದ್ರೆ ನಾನು ನಟಿಸುತ್ತೇನೆ ಅಂತಾ ಹೇಳಿದ್ದರು. ಆದ್ರೆ ಸಿನಿಮಾವನ್ನು ತಮಿಳು ಹಾಗೂ ತೆಲುಗಿನಲ್ಲಿ ರಿಮೇಕ್ ಮಾಡೋ ಬಗ್ಗೆ ನಾನೇನು ನಿರ್ಧಾರ ಮಾಡಿಲ್ಲ ಅಂತಾ ಪವನ್ ಹೇಳಿದ್ದಾರೆ.
 
ಇನ್ನು ಸಿನಿಮಾಕ್ಕೆ ಮೊನ್ನೆ ಥಿಯೇಟರ್ ಸಮಸ್ಯೆ ಕಾಡಿತ್ತು.ಆದ್ರೀಗ ಇದಕ್ಕೂ ಮುಕ್ತಿ ಸಿಕ್ಕಿದೆ. ಮೇ 20 ರಂದು ಯೂ ಟರ್ನ್ ಸಿನಿಮಾ ರಾಜ್ಯ ಸೇರಿದಂತೆ ಹೊರ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಸಿನಿ ರಸಿಕರು ಈ ಪವನ್ ಕುಮಾರ್ ಅವರ ಹೊಸ ಪ್ರಯತ್ನವನ್ನು ಕಣ್ತುಂಬಿಕೊಳ್ಳೋದಕ್ಕೆ ಕಾಯುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಶಬರಿಮಲೆಗೆ ತೆರಳಿದ ನಟ ದರ್ಶನ್ ತೂಗುದೀಪ