Publish Date: Thu, 09 Jun 2016 (18:56 IST)
Updated Date: Thu, 09 Jun 2016 (19:13 IST)
ಶಾರೂಖ್ ಖಾನ್ ಹಾಗೂ ಅಲಿಯಾ ಭಟ್ ಅಭಿನಯದ 'ವಾಕ್ ಆಂಡ್ ಟಾಕ್' ಚಿತ್ರವು ಅಕ್ಟೊಂಬರ್ 2ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗ್ತಿದೆ. ಆದ್ರೆ ಇದೇ ವರ್ಷವೇ ಚಿತ್ರ ಬಿಡುಗಡೆಯಾಗಲಿದೆಯಂತೆ.
ಇಂಗ್ಲೀಷ್ ವಿಂಗ್ಲೀಷ್ ಸಿನಿಮಾ ಖ್ಯಾತಿಯ ಗೌರಿ ಶಿಂಧೆ ನಿರ್ದೇಶನದ ವಾಕ್ ಆಂಡ್ ಟಾಕ್ ಸಿನಿಮಾವೊಂದರಲ್ಲಿ ಆಲಿಯಾ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ಅಭಿನಯಿಸಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಿದ್ದಾರೆ. ಇನ್ನು ನಿರ್ಮಾಣಕ್ಕೆ ಶಾರುಖ್ ಅವರ ರೆಡ್ ಚಿಲ್ಲಿ ಬ್ಯಾನರ್ ಕೂಡ ಸಾಥ್ ನೀಡದೆ..
ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ಗೌರಿ ಶಿಂಧೆ ನಿರ್ದೇಶನದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಆಲಿಯಾ ಹಾಗೂ ಶಾರುಖ್ ಖಾನ್ ಅವರು ಜೊತೆಯಾಗಿ ಅಭಿನಯಿಸುತ್ತಾರೆ ಅಂತಾ ಗೊತ್ತಾದಾಗಲೇ ಅಯ್ಯೋ ಅಪ್ಪ ಮಗಳ ವಯಸ್ಸಿನ ಇವರಿಬ್ಬರು ಸಿನಿಮಾದಲ್ಲಿ ಎಂತಹ ಪಾತ್ರ ಮಾಡ್ಬಹುದು ಅಂತಾ ಲೆಕ್ಕಾಚಾರ ಹಾಕುತ್ತಿದ್ದರು.
ಇನ್ನು ಆಲಿಯಾ ಹಾಗೂ ಶಾರುಖ್ ವಯಸ್ಸಿನಲ್ಲಿ ಸಾಕಷ್ಟು ಅಂತರವಿದೆ. ಶಾರುಖ್ ವಯಸ್ಸಿನ ಅರ್ಧಕ್ಕಿಂತಲೂ ಕಡಿಮೆ ವಯಸ್ಸು ಆಲಿಯಾಳದ್ದು, ಹಾಗಾಗಿ ಇಬ್ಬರ ಕೆಮಿಸ್ಟ್ರಿ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.
ಇನ್ನು ಮೊದಲ ಬಾರಿಗೆ ಶಾರುಖ್ ಖಾನ್ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿರೋದಕ್ಕೆ ಆಲಿಯಾ ಭಟ್ ಅವರು ತುಂಬಾನೇ ಖುಷಿಯಾಗಿದ್ದಾರಂತೆ. ಸಿನಿಮಾದಲ್ಲಿ ನನ್ನ ಹಾಗೂ ಶಾರುಖ್ ಖಾನ್ ಅವರ ಕೆಮಿಸ್ಟ್ರಿ ತುಂಬಾನೇ ಚೆನ್ನಾಗಿ ವರ್ಕೌಟ್ ಆಗುತ್ತೆ ಅನ್ನೋ ನಂಬಿಕೆ ನನಗಿದೆ ಅಂತಾ ಆಲಿಯಾ ಹೇಳಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ