Select Your Language

Notifications

webdunia
webdunia
webdunia
webdunia

777 ಚಾರ್ಲಿ ಸಿನಿಮಾಕ್ಕೆ ನಾಲ್ಕು ರಾಜ್ಯ ಚಲನಚಿತ್ರ ಪ್ರಶಸ್ತಿ: ಪ್ರಶಸ್ತಿ ಗೆದ್ದ ರಕ್ಷಿತ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

State Film Award, Charlie Cinema, Actor Rakshit Shetty

Sampriya

ಬೆಂಗಳೂರು , ಶನಿವಾರ, 4 ಅಕ್ಟೋಬರ್ 2025 (14:04 IST)
Photo Credit X
ಬೆಂಗಳೂರು: ನಟ ರಕ್ಷಿತ್‌ ಶೆಟ್ಟಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡ ಸೂಪರ್‌ ಹಿಟ್‌ ಸಿನಿಮಾ 777 ಚಾರ್ಲಿಗೆ ನಾಲ್ಕು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿರುವುದಕ್ಕೆ ಚಿತ್ರತಂಡ ಫುಲ್‌ ಖುಷಿಯಾಗಿದೆ.

2021ನೇ ಸಾಲಿನ ಕನ್ನಡ ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 2025ರಲ್ಲಿ ಪ್ರಕಟವಾಗಿದೆ. 777 ಚಾರ್ಲಿ ಸಿನಿಮಾದ ಅಭಿನಯಕ್ಕಾಗಿ ರಕ್ಷಿತ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಈ ಕುರಿತು ರಕ್ಷಿತ್‌ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 

ಚಾರ್ಲಿ ಸಿನಿಮಾವು 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ, ಅತ್ಯುತ್ತಮ ಸಂಕಲನ (ಪ್ರತೀಕ್‌ ಶೆಟ್ಟಿ), ಅತ್ಯುತ್ತಮ ಗೀತರಚನೆ (ನಾಗಾರ್ಜುನ)ಯಲ್ಲೂ ಕೂಡ ಈ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ.  

777 ಚಾರ್ಲಿ 4 ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದೆ. 2 ನೇ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಗೀತರಚನೆಕಾರ ಮತ್ತು ಅತ್ಯುತ್ತಮ ಸಂಪಾದನೆ ವಿಭಾಗಕ್ಕೆ ಸಿನಿಮಾವನ್ನು ಆಯ್ಕೆ ಮಾಡಿದ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ರಕ್ಷಿತ್‌ ಶೆಟ್ಟಿ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ನಮ್ಮ ಸಿನಿಮಾ ತಂಡ ಮತ್ತು ಪ್ರೇಕ್ಷಕರಿಗೂ ಧನ್ಯವಾದ. ಕಿರಣ್‌ರಾಜ್‌ ಅವರ ವಿಷನ್‌, ಪ್ರಥೀಕ್‌ ಅವರ ಎಡಿಟಿಂಗ್‌, ನಾಗಾರ್ಜುನ್‌ ಶರ್ಮಾ ಅವರ ಅತ್ಯುತ್ತಮ ಪದಗಳ ಗೀತರಚನೆಯು ನನ್ನ ಹೃದಯ ಮುಟ್ಟಿದೆ ಎಂದು ಅವರು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಂಬಾಳೆ ಫಿಲಂಸ್ ಮನವಿಗೂ ಬೆಲೆಯಿಲ್ಲ, ಕಾಂತಾರ ಕ್ಲೈಮ್ಯಾಕ್ಸ್ ದೃಶ್ಯಗಳೇ ಲೀಕ್