Select Your Language

Notifications

webdunia
webdunia
webdunia
webdunia

ಪ್ರತಿಯೊಬ್ಬ ಫಿಲ್ಮ್ ಮೇಕರ್ಸ್‌ ನಾಚಿಕೆಪಡಬೇಕು: ಕಾಂತಾರ ನೋಡಿ ರಾಮ್‌ ಗೋಪಾಲ್ ವರ್ಮಾ ಹೀಗಂದಿದ್ಯಾಕೆ

RamGopal Varma

Sampriya

ಬೆಂಗಳೂರು , ಶನಿವಾರ, 4 ಅಕ್ಟೋಬರ್ 2025 (11:13 IST)
Photo Credit X
ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಕಾಂತಾರ ಅಧ್ಯಾಯ 1 ರಲ್ಲಿ ನಟ ಮತ್ತು ನಿರ್ದೇಶಕರಾಗಿ ರಿಷಬ್ ಶೆಟ್ಟಿಯವರ ಕೆಲಸಕ್ಕೆ ಫಿದಾ ಆಗಿದ್ದಾರೆ. ಇದೊಂದು ಅದ್ಭುತ ಸಿನಿಮಾ ಎಂದು ಶ್ಲಾಘಿಸಿದ್ದಾರೆ. 

ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಾಂತಾರ ಅಧ್ಯಾಯ 1 ಬಾಕ್ಸ್ ಆಫೀಸ್‌ನಲ್ಲಿ ಭಾರಿ ಪ್ರತಿಕ್ರಿಯೆಗೆ ತೆರೆದುಕೊಂಡಿದೆ. 2022 ರಲ್ಲಿ ಕಾಂತಾರ ಅಧ್ಯಾಯ 2ನೊಂದಿಗೆ ಭಾರತೀಯ ಸಿನಿಮಾ ರಂಗವನ್ನೇ ಬೆರಗು ಗೊಳಿಸಿದ ರಿಷಭ್‌ ಶೆಟ್ಟಿ ಇದೀಗ ಕಾಂತಾರ ಅಧ್ಯಾಯ 1 ಇದೀಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ರಿಷಬ್ ಅವರ ಶ್ರಮವನ್ನು ನೋಡಿ ಭಾರತದ ಎಲ್ಲಾ ಚಿತ್ರ ನಿರ್ಮಾಪಕರು ‘ನಾಚಿಕೆಪಡಬೇಕು’ ಎಂದು ಹೇಳುವ ಮೂಲಕ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. 

X ನಲ್ಲಿನ ತಮ್ಮ ಟ್ವೀಟ್‌ನಲ್ಲಿ, ರಾಮ್ ಗೋಪಾಲ್ ವರ್ಮಾ ಅವರು ಬರೆದಿದ್ದಾರೆ, “KANTAAAARRRAAA ಅದ್ಭುತವಾಗಿದೆ. ಮತ್ತು VFX ..ಬೋನಸ್ ಆಗಿರುವ ವಿಷಯವನ್ನು ಮರೆತು, ಅವರ ಪ್ರಯತ್ನ ಮಾತ್ರ #kantarachaoter1 ಬ್ಲಾಕ್‌ಬಸ್ಟರ್ ಆಗಲು ಅರ್ಹವಾಗಿದೆ. ಒಬ್ಬ ಶ್ರೇಷ್ಠ ನಟ." ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ನಟಿ ರಶ್ಮಿಕಾ, ವಿಜಯ್ ದೇವರಕೊಂಡ