Webdunia - Bharat's app for daily news and videos

Install App

ಇಂದು ಬಿಡುಗಡೆಯಾಗಲಿದೆ ಈ ನಾಲ್ಕು ಕುತೂಹಲಕಾರಿ ಸಿನಿಮಾ

Webdunia
ಶುಕ್ರವಾರ, 7 ಫೆಬ್ರವರಿ 2020 (09:01 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ನಾಲ್ಕು ಕುತೂಹಲ ಕೆರಳಿಸಿರುವ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಈ ವೀಕೆಂಡ್ ಹಬ್ಬ ಮಾಡಬಹುದು.


ವಿಜಯ್ ರಾಘವೇಂದ್ರ ವಯಸ್ಸಾದ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ನೈಜ ಘಟನೆಯಾಧಾರಿತ ಕತೆಯುಳ್ಳ ಸಿನಿಮಾ ಮಾಲ್ಗುಡಿ ಡೇಸ್ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು, ಟ್ರೈಲರ್‍ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದ್ದು, ವಿಜಯ್ ರಾಘವೇಂದ್ರರಿಗೆ ಒಂದು ಬ್ರೇಕ್ ನೀಡಬಹುದು ಎಂದೇ ನಿರೀಕ್ಷಿಸಲಾಗಿದೆ.

ಪ್ರೀಮಿಯರ್ ಪದ್ಮಿನಿ ಸಿನಿಮಾ ಮೂಲಕ ಗಮನ ಸೆಳೆದಿದ್ದ ಪ್ರಮೋದ್ ಮತ್ತು ಬೃಂದಾವನ ಖ್ಯಾತಿಯ ಮಿಲನಾ ನಾಗರಾಜ್ ಜತೆಯಾಗಿ ನಟಿಸಿದ ಸಿನಿಮಾ ಮತ್ತೆ ಉದ್ಭವ ಕೂಡಾ ಇಂದೇ ತೆರೆ ಕಾಣುತ್ತಿದೆ. ಕಾಮಿಡಿ, ಎಂಟರ್ ಟೈನರ್ ಸಿನಿಮಾ ನಿಮ್ಮ ಮನರಂಜಿಸುವುದು ಖಚಿತಾ.

ಇನ್ನೊಂದು ಹೆಚ್ಚು ನಿರೀಕ್ಷೆ ಮೂಡಿಸಿರುವ ಸಿನಿಮಾವೆಂದರೆ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್ ಮ್ಯಾನ್’. ಈಗಾಗಲೇ ಡಿ ಬಾಸ್ ದರ್ಶನ್ ಬಿಡುಗಡೆ ಮಾಡಿರುವ ಟ್ರೈಲರ್ ವೀಕ್ಷಕರ ಮೆಚ್ಚುಗೆ ಗಳಿಸಿದೆ.

ನಾಲ್ಕನೆಯದ್ದು, ನಾಗಿಣಿ ಧಾರವಾಹಿ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಯಕರಾಗಿರುವ ದಿಯಾ ಎಂಬ ಸಿನಿಮಾ. ಹೊಸಬರ ಸಿನಿಮಾವಾದರೂ ಈಗಾಗಲೇ ಟ್ರೈಲರ್ ಮೂಲಕ ಭಾರೀ ಕುತೂಹಲ ಮೂಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ಮುಂದಿನ ಸುದ್ದಿ
Show comments