ಬೆಂಗಳೂರು : ನಟಿ ಸಂಯುಕ್ತ ಹೊರನಾಡು ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ ಎಂಬ ಸುದ್ದಿ ಇತ್ತಿಚೆಗೆ ಎಲ್ಲಾ ಕಡೆ ಹರಿದಾಡುತ್ತಿದ್ದು, ಆದರೆ ಇದೀಗ ಅವರು ಫೋಟೊ ಶೂಟ್ ಮಾಡಿರುವುದರ ಹಿಂದಿನ ಕಾರಣವೆನೆಂಬುದು ತಿಳಿದುಬಂದಿದೆ.
ಸಾಮಾನ್ಯವಾಗಿ ಸಿನಿಮಾ ನಟಿಯರು ಹೊಸ ಚಿತ್ರಗಳಿಗಾಗಿ ಅಥವಾ ತಮ್ಮ ಸೌಂದರ್ಯವನ್ನು ತೋರಿಸಲು ಫೋಟೋ ಶೂಟ್ ಮಾಡಿಸುತ್ತಾರೆ. ಆದರೆ ನಟಿ ಸಂಯುಕ್ತ ಹೊರನಾಡು ಅವರು ಮಾತ್ರ ಪರಿಸರ ಜಾಗೃತಿಗಾಗಿ ಫೋಟೋ ಶೂಟ್ ಮಾಡಿಸಿದ್ದಾರಂತೆ.
ಸಂಯುಕ್ತಾ ಅವರು ಪ್ರತಿ ವರ್ಷ `ವಿಶ್ವ ಭೂಮಿ' ತಿಂಗಳನ್ನು ತಮ್ಮದೇ ಶೈಲಿಯಲ್ಲಿ ಆಚರಿಸುತ್ತಾ ಬಂದಿದ್ದು, ಈ ಬಾರಿ ಹೆಣ್ಣನ್ನು ಭೂಮಿಗೆ ಹೋಲಿಕೆ ಮಾಡಿ ಭೂಮಿ, ನೀರು, ಗಾಳಿ ಹಾಗೂ ಅಗ್ನಿಯನ್ನು ಬಿಂಬಿಸುವಂತಹ ಕಾಸ್ಟ್ಯೂಮ್‍ಗಳನ್ನು ತೊಟ್ಟು ಹೊಸ ಪರಿಕಲ್ಪನೆ ಮೂಲಕ ಈ ನಾಲ್ಕು ಮನುಷ್ಯನ ಬದುಕಲ್ಲಿ ಎಷ್ಟು ಅತ್ಯಗತ್ಯ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ