Select Your Language

Notifications

webdunia
webdunia
webdunia
webdunia

ಡ್ರಗ್ಸ್ ಕೇಸ್ ನಲ್ಲಿ ಬಾಲಿವುಡ್ ನಟ, ನಟಿಯ ವಿರುದ್ಧ ಎಫ್ ಐ ಆರ್

ಡ್ರಗ್ಸ್ ಕೇಸ್ ನಲ್ಲಿ ಬಾಲಿವುಡ್ ನಟ, ನಟಿಯ ವಿರುದ್ಧ ಎಫ್ ಐ ಆರ್
ಮುಂಬೈ , ಶುಕ್ರವಾರ, 25 ಸೆಪ್ಟಂಬರ್ 2020 (19:05 IST)
ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ರಕುಲ್ ಪ್ರೀತ ಸಿಂಗ್ ಸೇರಿದಂತೆ ಹಲವರಿಗೆ ಡ್ರಗ್ಸ್ ಕೇಸ್ ವಿಚಾರಣೆಗಾಗಿ ಎನ್ ಸಿ ಬಿ ನೋಟಿಸ್ ನೀಡಿದೆ.

ನಟಿ ಸಾರಾ ಅಲಿಖಾನ್ ಎನ್ ಸಿ ಬಿ ವಿಚಾರಣೆಗೆ ಆಗಮಿಸಲಿದ್ದಾರೆ. ಈ ನಡುವೆ ಟಿವಿ ನಟರಾದ ಸನಮ್ ಜೋಹರ್ ಮತ್ತು ಅಬಿಗೈಲ್ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಟಿವಿ ನಟರಾದ ಸನಮ್ ಜೋಹರ್ ಮತ್ತು ಅಬಿಗೈಲ್ ಪಾಂಡೆ ವಿರುದ್ಧ ಮಾದಕ ದ್ರವ್ಯ ಸೇವನೆಗಾಗಿ ಎಫ್ಐಆರ್ ದಾಖಲಿಸಲಾಗಿದೆ. ಅಬಿಗೈಲ್ ಪಾಂಡೆ ಅವರ ಜುಹು ಮನೆಯ ಮೇಲೆ ದಾಳಿ ನಡೆಸಲಾಗಿದ್ದು, ಅಲ್ಲಿ ಸ್ವಲ್ಪ ಪ್ರಮಾಣದ ಚರಸ್ ಪತ್ತೆಯಾಗಿದೆ.
webdunia

ನಟ ಸುಶಾಂತ ಸಿಂಗ್ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿ ತನ್ನ ತಪ್ಪೊಪ್ಪಿಗೆಯಲ್ಲಿ ರಾಕುಲ್ ಪ್ರೀತ್ ಸಿಂಗ್ ಹೆಸರು ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರು ರಕುಲ್ ಪ್ರೀತ್ ಸಿಂಗ್ ಅವರೊಂದಿಗೆ ಗಾಂಜಾ ಸೇವಿಸುವ ಪಾರ್ಟಿಗಳನ್ನು ನಡೆಸಿದ್ದಾರೆ ಎಂದಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ದೀಪಿಕಾ ಪಡುಕೋಣೆ ಡ್ರಗ್ ಚಾಟ್ ಗುಂಪಿನ ಅಡ್ಮಿನ್?