ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನ ಆರೋಪಿ ನಂ1 ಪವಿತ್ರಾ ಗೌಡ ಬಹುದಿನಗಳ ಬೇಡಿಕೆ ಕೊನೆಗೂ ಜೈಲಿನಲ್ಲಿ ಈಡೇರಿದೆ. ಇದಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.
ಜೈಲಿನಲ್ಲಿ ಮನೆಯೂಟಕ್ಕೆ ಅವಕಾಶ ನೀಡಿ ಎಂದು ಪವಿತ್ರಾ ಗೌಡ ಹಲವು ದಿನಗಳಿಂದ ಕೋರ್ಟ್ ಗೆ ಮನವಿ ಸಲ್ಲಿಸುತ್ತಲೇ ಇದ್ದರು. ಜೈಲಿನಲ್ಲಿ ಒಳ್ಳೆಯ ಊಟವಿಲ್ಲ, ಇದರಿಂದ ಆರೋಗ್ಯ ಹಾಳಾಗುತ್ತಿದೆ. ಮನೆ ಊಟಕ್ಕೆ ಅವಕಾಶ ಕೊಡಿ ಎಂದು ಹಲವು ಬಾರಿ ಮನವಿ ಮಾಡಿದ್ದರು.
ಇದೀಗ ಕೊನೆಗೂ ನ್ಯಾಯಾಲಯ ಪವಿತ್ರಾ ಗೌಡ ಸೇರಿದಂತೆ ಮೂವರು ಆರೋಪಿಗಳಿಗೆ ಮನೆ ಊಟಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಪವಿತ್ರಾ ಗೌಡ ಅಲ್ಲದೆ, ಪ್ರಕರಣದ ಆರೋಪಿಗಳಾದ ನಾಗರಾಜು, ಲಕ್ಷ್ಮಣ್ ಗೂ ಕೋರ್ಟ್ ಮನೆ ಊಟಕ್ಕೆ ಅವಕಾಶ ನೀಡಿದೆ.
ಮೂವರ ಅರ್ಜಿ ಪರಿಶೀಲಿಸಿದ ಕೋರ್ಟ್ ದಿನಕ್ಕೆ ಒಂದು ಬಾರಿ ಮನೆ ಊಟ ನೀಡಲು ಅವಕಾಶ ನೀಡಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ರೇಣುಕಾಸ್ವಾಮಿ ಮರ್ಡರ್ ಕೇಸ್ ಆರೋಪಿಗಳಿಗೆ ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿತ್ತು. ಜೈಲಿನಲ್ಲಿ ಇತರೆ ಖೈದಿಗಳಂತೇ ಅವರನ್ನೂ ನೋಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮೂವರಿಗೆ ಮನೆ ಊಟಕ್ಕೆ ಅವಕಾಶ ಸಿಗಲಿದೆ.