Select Your Language

Notifications

webdunia
webdunia
webdunia
webdunia

ಕೊನೆಗೂ ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ಬಿಡುಗಡೆಗೆ ಮುಹೂರ್ತ ಪಿಕ್ಸ್

ಕೊನೆಗೂ ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ಬಿಡುಗಡೆಗೆ ಮುಹೂರ್ತ ಪಿಕ್ಸ್
ಬೆಂಗಳೂರು , ಗುರುವಾರ, 7 ಸೆಪ್ಟಂಬರ್ 2023 (08:50 IST)
ಬೆಂಗಳೂರು: ಚಿರಂಜೀವಿ ಸರ್ಜಾ ನಿಧನರಾಗಿ ಮೂರು ವರ್ಷಗಳಾಗಿವೆ. ಆದರೆ ಅವರು ಕೊನೆಯದಾಗಿ ನಟಿಸಿದ್ದ ರಾಜ ಮಾರ್ತಂಡ ಸಿನಿಮಾ ಇನ್ನೂ ಬಿಡುಗಡೆಯಾಗಿರಲಿಲ್ಲ.

ಇದೀಗ ರಾಜ ಮಾರ್ತಂಡ ಸಿನಿಮಾ ಬಿಡುಗಡೆಗೆ ಮುಹೂರ್ತ ಕೂಡಿಬಂದಿದೆ. ಅಕ್ಟೋಬರ್ 6 ರಂದು ಧ್ರುವ ಸರ್ಜಾ ಹುಟ್ಟುಹಬ್ಬದಂದು ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ಬಿಡುಗಡೆಯಾಗಲಿದೆ.

ಈ ಸಿನಿಮಾದಲ್ಲಿ ಚಿರು ಸರ್ಜಾ ನಟನೆ ಮಾತ್ರ ಮಾಡಿದ್ದರು. ಅವರಿಗೆ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಆಗಿರಲಿಲ್ಲ. ಹೀಗಾಗಿ ಅಣ್ಣನ ಪಾತ್ರಕ್ಕೆ ತಮ್ಮ ಧ್ರುವ ಡಬ್ ಮಾಡಿದ್ದರು. ಅಣ್ಣನ ಮೇಲೆ ಧ್ರುವಗೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ಧ್ರುವ ಹುಟ್ಟುಹಬ್ಬದಂದೇ ಚಿರು ಸರ್ಜಾ ಸಿನಿಮಾ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜವಾನ್ ರಿಲೀಸ್: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಮಾಡುತ್ತಾ ಶಾರುಖ್ ಸಿನಿಮಾ?