Select Your Language

Notifications

webdunia
webdunia
webdunia
webdunia

ಸಿಂಬು ಮನೆ ಮುಂದೆ ಪ್ರತಿಭಟನೆ ನಡೆಸಿದ ಅಭಿಮಾನಿಗಳು. ಕಾರಣವೇನು ಗೊತ್ತಾ?

ಸಿಂಬು ಮನೆ ಮುಂದೆ ಪ್ರತಿಭಟನೆ ನಡೆಸಿದ ಅಭಿಮಾನಿಗಳು. ಕಾರಣವೇನು ಗೊತ್ತಾ?
ಚೆನ್ನೈ , ಶುಕ್ರವಾರ, 8 ಜನವರಿ 2021 (11:42 IST)
ಚೆನ್ನೈ : ನಟ ಸಿಂಬು ತಮಿಳು ಚಿತ್ರರಂಗದ ಖ್ಯಾತ ನಟ. ಇವರು ಪ್ರಸ್ತುತ ಈಶ್ವರನ್ ಚಿತ್ರದಲ್ಲಿ ನಟಿಸಿದ್ದಾರೆ. ಸುಶೀಂದ್ರನ್ ನಿರ್ದೇಶನದ ಈ ಚಿತ್ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ.  

ಅಲ್ಲದೇ ವೆಂಕಟ್ ಪ್ರಭು ನಿರ್ದೇಶನದ ಕಾನ್ಫರೆನ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆನಂತರ  ಅವರು ಶೀಘ್ರದಲ್ಲಿಯೇ ಕನ್ನಡ ಚಿತ್ರ ಪಪ್ಪಿ ಚಿತ್ರ ತಮಿಳು ರಿಮೇಕ್ ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಮಧ್ಯೆ ಸಿಂಬು ಅವರ ಅಭಿಮಾನಿಗಳು ಸಿಂಬು ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಕಾರಣವೇನೆಂದರೆ ಫ್ಯಾನ್ ಕ್ಲಬ್ ನಲ್ಲಿ ಉಂಟಾದ ಕೋಲಾಹಲದಿಂದಾಗಿ ಅಭಿಮಾನಿಗಳು ಶಾಶ್ವತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ  ಫ್ಯಾನ್ಸ್ ಕ್ಲಬ್ ನ ಅಖಿಲ ಭಾರತ ನಾಯಕನನ್ನು ಬದಲಿಸಬೇಕೆಂದು ಒತ್ತಾಯಿಸಿ ಮನೆಯ ಮುಂದೆ ಹೋರಾಟ ನಡೆಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಾಗಿಣಿ ದ್ವಿವೇದಿ ಭವಿಷ್ಯ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಿರ್ಧಾರ