Publish Date: Wed, 02 Dec 2020 (09:13 IST)
Updated Date: Wed, 02 Dec 2020 (09:15 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದ ಮೇಲೆ ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರದೇ ಹೋದರೆ ಎಂಬ ಆತಂಕ ನಿರ್ಮಾಪಕರಲ್ಲಿತ್ತು.
ಆದರೆ ಕಳೆದ ವಾರದಿಂದ ಒಟ್ಟು ಮೂರು ಹೊಸ ಸಿನಿಮಾಗಳು ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು, ಈ ಮೂರಕ್ಕೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿರುವುದು ನಿರ್ಮಾಪಕರ ಮೊಗದಲ್ಲಿ ಹರ್ಷ ಮೂಡಿಸಿದೆ. ವಿಶೇಷವೆಂದರೆ ಈ ಮೂರೂ ಸಿನಿಮಾಗಳೂ ಸ್ಟಾರ್ ಕಾಸ್ಟ್ ಇಲ್ಲದೇ ವಿಭಿನ್ನ ಕತೆಯಾಧಾರಿತ ಸಿನಿಮಾವಾಗಿತ್ತು. ಹಾಗಿದ್ದರೂ ಜನ ಥಿಯೇಟರ್ ಗೆ ಬಂದು ಸಿನಿಮಾ ನೋಡಿದ್ದಾರೆಂದರೆ ಸ್ಟಾರ್ ನಟರ ಸಿನಿಮಾವನ್ನೂ ಭಯವಿಲ್ಲದೇ ಬಿಡುಗಡೆ ಮಾಡುವ ಧೈರ್ಯ ನಿರ್ಮಾಪಕರಿಗೆ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಒಂದೊಂದೇ ಸ್ಟಾರ್ ನಟರ ಸಿನಿಮಾಗಳೂ ತೆರೆಗೆ ಬರುವುದು ಗ್ಯಾರಂಟಿ.