Publish Date: Wed, 02 Dec 2020 (09:05 IST)
Updated Date: Wed, 02 Dec 2020 (09:06 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಗಳು ಐರಾ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಐರಾ ರಾಧಿಕಾ ಸಾಮಾಜಿಕ ಜಾಲತಾಣ ಮೂಲಕ ಹರಸಿದ್ದಾರೆ.
ಐರಾಳ ಮುದ್ದು ಫೋಟೋಗಳ ಸಂಗ್ರಹ ಪ್ರಕಟಿಸಿರುವ ರಾಧಿಕಾ ನೀನು ನಮ್ಮ ಜೀವನದಲ್ಲಿ ಸಂತೋಷ ಎನ್ನುವ ದೊಡ್ಡ ಉಡುಗೊರೆ ನೀಡಿರುವೆ. ಸದಾ ಖುಷಿಯಾಗಿರು. ಆದರೆ ಪ್ಲೀಸ್ ಇಷ್ಟು ಬೇಗ ದೊಡ್ಡವಳಾಗಬೇಡ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಇನ್ನು, ಐರಾಗೆ ಅಭಿಮಾನಿಗಳು ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ.