ಬೆಂಗಳೂರು: ತೆಲುಗು ನಟ ಚಿರಂಜೀವಿ ಅವರು ದಿಢೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದಕ್ಕೆ ಕಾರಣ ನಟನ ಮುಖವನ್ನು ಬಳಸಿ ಎಐ ಮೂಲಕ ಅಶ್ಲೀಲ ವಿಡಿಯೋ ಹರಿಬಿಟ್ಟ ಸಂಬಂಧ ನಟ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ಅಕ್ಟೋಬರ್ 27 ರಂದು ಸಲ್ಲಿಸಲಾದ ದೂರಿನಲ್ಲಿ, ಕೆಲವು ವೆಬ್‌ಸೈಟ್‌ಗಳಲ್ಲಿ ನಟನ ಎಐ ರಚಿತ ಅಶ್ಲೀಲ ವಿಡಿಯೋವನ್ನು ಬಿಡಲಾಗಿದೆ ಎಂದರು.
ನಟನ ದೂರಿನಲ್ಲಿ ಕೃತಕ ವೀಡಿಯೋಗಳು ಸಾರ್ವಜನಿಕವಾಗಿ ತಮ್ಮ ಮೇಲೆ ತಪ್ಪು ಗ್ರಹಿಕೆ ಮೂಡಲು ಕಾರಣವಾಗಿದೆ. ನನ್ನ ಮೇಲಿರುವ ಸದ್ಭಾವನೆಯನ್ನು ವಿರೂಪಗಳಿಸುವ ದುರುದ್ದೇಶಪೂರಿತವಾಗಿ ಈ ರೀತಿ ಮಾಡಲಾಗಿದೆ ಎಂದಿದ್ದಾರೆ.
`ಈ ವೀಡಿಯೊಗಳು ಸಂಪೂರ್ಣವಾಗಿ ನಕಲಿಯಾಗಿದ್ದು, ಕೃತಕ ಬುದ್ಧಿಮತ್ತೆ ಅಥವಾ `ಡೀಪ್‌ಫೇಕ್ ಅಶ್ಲೀಲತೆ ಬಳಸಿ ರಚಿಸಲಾಗಿದೆ. ನನ್ನ ಮುಖಭಾವ ಮತ್ತು ವ್ಯಕ್ತಿತ್ವವನ್ನು ಕಾನೂನುಬಾಹಿರವಾಗಿ ಅಶ್ಲೀಲ ವಿಷಯವಾಗಿ ಪರಿವರ್ತಿಸಲಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಹೈದರಾಬಾದ್ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳೋರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ, ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ, ಭಾರತೀಯ ನ್ಯಾಯ ಸಂಹಿತಾ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದರು.