Exclusive: ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ: ಅನಿರುದ್ಧ ಜತಕರ ಫಸ್ಟ್ ರಿಯಾಕ್ಷನ್

Krishnaveni K
ಗುರುವಾರ, 11 ಸೆಪ್ಟಂಬರ್ 2025 (18:54 IST)
ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಗ್ಗೆ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಜತಕರ ವೆಬ್ ದುನಿಯಾಗೆ ಪ್ರತಿಕ್ರಿಯಸಿದ್ದಾರೆ.

ಡಾ ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಬಿ ಸರೋಜಾದೇವಿಯವರಿಗೆ ಇಂದು ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಮೊದಲು ಚಿತ್ರರಂಗದಿಂದ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರಿಗೆ ಮಾತ್ರ ಕರ್ನಾಟಕ ರತ್ನ ನೀಡಲಾಗಿತ್ತು.

ಇದೀಗ ಚಿತ್ರರಂಗಕ್ಕೆ ಅಪಾರ ಕೊಡುಗೆ ಸಲ್ಲಿಸಿದ ಡಾ ವಿಷ್ಣುವರ್ಧನ್ ಮತ್ತು ಬಿ ಸರೋಜಾದೇವಿಯವರಿಗೆ ಕರ್ನಾಟಕ ರತ್ನ ಗೌರವ ಸಲ್ಲಿಸಲಾಗಿದೆ. ವಿಷ್ಣುವರ್ಧನ್ 75 ನೇ ಜನ್ಮ ಜಯಂತಿಗೆ ವಾರಕ್ಕೆ ಮೊದಲು ಈ ಗೌರವ ಸಿಕ್ಕಿರುವುದು ಅವರ ಅಭಿಮಾನಿಗಳ ಖುಷಿ ಮೇರೆ ಮೀರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿರುದ್ಧ ಜತಕರ ‘ಬಹಳ ಖುಷಿಯಾಗ್ತಿದೆ. ಇದು ನಮ್ಮತನವನ್ನು ನಾವು ಗೌರವಿಸಿದ ಹಾಗೆ. ನಮ್ಮ ಸಾಧಕರನ್ನು ಗೌರವಿಸುವುದು ನಮ್ಮ ಜವಾಬ್ಧಾರಿ. ಅದನ್ನು ಈಗ ನಮ್ಮ ಕರ್ನಾಟಕ ಸರ್ಕಾರ ಮಾಡಿದೆ. ಅದಕ್ಕೆ ನಾನು ನಮ್ಮ ವೈಯಕ್ತಿಕ ಕುಟುಂಬ ಮತ್ತು ಬೃಹತ್ ಕುಟುಂಬ ಅಂದರೆ ನಮ್ಮ ಕನ್ನಡಿಗರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ, ಇದಕ್ಕಾಗಿ ಶ್ರಮಿಸಿದ ಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಅನಿರುದ್ಧ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಮುಂದಿನ ಸುದ್ದಿ
Show comments