ಕಣ್ಣೀರು ಹಾಕಿ ವಿಡಿಯೋ ಪೋಸ್ಟ್ ಮಾಡಿ ಡಿಲೀಟ್ ಮಾಡಿದ ನಟ ದುಲ್ಕರ್ ಸಲ್ಮಾನ್!

Webdunia
ಮಂಗಳವಾರ, 4 ಜುಲೈ 2023 (09:23 IST)
ಕೊಚ್ಚಿ: ಮಲಯಾಳಂ ಮೂಲದ ಬಹುಭಾಷಾ ನಟ ದುಲ್ಕರ್ ಸಲ್ಮಾನ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಕಣ್ಣೀರು ಹಾಕಿಕೊಂಡು ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಬಳಿಕ ಅದು ವೈರಲ್ ಆಗುತ್ತಿದ್ದಂತೇ ಡಿಲೀಟ್ ಮಾಡಿದ್ದಾರೆ.

ಮಲಯಾಳಂ ಸ್ಟಾರ್ ನಟ ಮಮ್ಮುಟ್ಟಿ ಪುತ್ರರಾಗಿರುವ ದುಲ್ಕರ್ ಕೂಡಾ ಮಲಯಾಳಂ, ತೆಲುಗು, ತಮಿಲು ಸಿನಿಮಾ ರಂಗದಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಇತ್ತೀಚೆಗೆ ಅವರು ನಟಿಸಿದ್ದ ಸೀತಾ ರಾಮಮ್ ಭರ್ಜರಿ ಹಿಟ್ ಆಗಿತ್ತು.

ಈಗ ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕಿಕೊಂಡು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದ ದುಲ್ಕರ್ ‘ನಾನು ನಿದ್ರೆ ಮಾಡದೇ ಕೆಲವು ಸಮಯವೇ ಆಗಿದೆ. ನಾನು ಇದೇ ಮೊದಲ ಬಾರಿಗೆ ಹೊಸ ಅನುಭವ ಅನುಭವಿಸುತ್ತಿದ್ದೇನೆ. ಇದು ನನ್ನ ಮನಸ್ಸಿನಿಂದ ಹೊರಬರಲಾಗದ ಸ್ಥಿತಿ ತಲುಪಿದೆ. ನಾನು ಇನ್ನೂ ಹೆಚ್ಚಿಗೆ ಹೇಳಲು ನನಗೆ ಅನುಮತಿ ಇದೆಯೋ ಇಲ್ಲವೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಬಳಿಕ ಈ ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಈ ಪೋಸ್ಟ್ ನ್ನು ಅವರ ಅಭಿಮಾನಿಗಳು ಸೇವ್ ಮಾಡಿ ಶೇರ್ ಮಾಡುತ್ತಿದ್ದಾರೆ. ನಟನ ಈ ಹೇಳಿಕೆ ಅಭಿಮಾನಿಗಳಲ್ಲಿ ಆತಂಕ ತಂದಿದೆ. ಆದರೆ ಇದು ಸಿನಿಮಾ ಪ್ರಚಾರದ ಗಿಮಿಕ್ ಇರಬಹುದೇ ಎಂದೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಂಗಳೂರಿನವರು ಕನ್ನಡ ಮಾತಾಡಲ್ಲ ಎಂದು ನಿಮಗೆ ಯಾರು ಹೇಳಿದ್ದು: ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಝೈದ್ ಖಾನ್

ಯಾರೋ ಒಬ್ಬ ನಂಗೆ ಈಡಿಯಟ್ ಅಂದ್ರೆ ನಾನು ಈಡಿಯಟ್ಟಾ... ವೇದಿಕೆ ಮೇಲೆ ಆ ಪದ ಬಳಸಿದ ರಚಿತಾ ರಾಮ್ Video

BigBoss Season Finale: ದಿನ ಬಾಕಿಯಿರುವಾಗಲೇ ಗಿಲ್ಲಿ ಬಗ್ಗೆ ಶಿವಣ್ಣ ಶಾಕಿಂಗ್ ಮಾತು

ಬಿಗ್‌ಬಾಸ್‌ ಶೋ ಫೈನಲ್‌ ವಾರ ಶುರುವಾಗುತ್ತಿದ್ದಂತೆ ಪ್ರೋಗ್ರಾಂ ಹೆಡ್‌ಗೆ ಬಿಗ್‌ಶಾಕ್‌: ಕಾರಣ ಏನು ಗೊತ್ತಾ

ಅಣ್ಣಾವ್ರ 35 ವರ್ಷಗಳ ಪದ್ಧತಿ ಮುರಿದಿದ್ದ ಅಂಬರೀಶ್

ಮುಂದಿನ ಸುದ್ದಿ
Show comments