ಕೊಚ್ಚಿ: ಮಲಯಾಳಂ ಮೂಲದ ಬಹುಭಾಷಾ ನಟ ದುಲ್ಕರ್ ಸಲ್ಮಾನ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಕಣ್ಣೀರು ಹಾಕಿಕೊಂಡು ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಬಳಿಕ ಅದು ವೈರಲ್ ಆಗುತ್ತಿದ್ದಂತೇ ಡಿಲೀಟ್ ಮಾಡಿದ್ದಾರೆ.
ಮಲಯಾಳಂ ಸ್ಟಾರ್ ನಟ ಮಮ್ಮುಟ್ಟಿ ಪುತ್ರರಾಗಿರುವ ದುಲ್ಕರ್ ಕೂಡಾ ಮಲಯಾಳಂ, ತೆಲುಗು, ತಮಿಲು ಸಿನಿಮಾ ರಂಗದಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಇತ್ತೀಚೆಗೆ ಅವರು ನಟಿಸಿದ್ದ ಸೀತಾ ರಾಮಮ್ ಭರ್ಜರಿ ಹಿಟ್ ಆಗಿತ್ತು.
ಈಗ ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕಿಕೊಂಡು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದ ದುಲ್ಕರ್ ನಾನು ನಿದ್ರೆ ಮಾಡದೇ ಕೆಲವು ಸಮಯವೇ ಆಗಿದೆ. ನಾನು ಇದೇ ಮೊದಲ ಬಾರಿಗೆ ಹೊಸ ಅನುಭವ ಅನುಭವಿಸುತ್ತಿದ್ದೇನೆ. ಇದು ನನ್ನ ಮನಸ್ಸಿನಿಂದ ಹೊರಬರಲಾಗದ ಸ್ಥಿತಿ ತಲುಪಿದೆ. ನಾನು ಇನ್ನೂ ಹೆಚ್ಚಿಗೆ ಹೇಳಲು ನನಗೆ ಅನುಮತಿ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬಳಿಕ ಈ ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಈ ಪೋಸ್ಟ್ ನ್ನು ಅವರ ಅಭಿಮಾನಿಗಳು ಸೇವ್ ಮಾಡಿ ಶೇರ್ ಮಾಡುತ್ತಿದ್ದಾರೆ. ನಟನ ಈ ಹೇಳಿಕೆ ಅಭಿಮಾನಿಗಳಲ್ಲಿ ಆತಂಕ ತಂದಿದೆ. ಆದರೆ ಇದು ಸಿನಿಮಾ ಪ್ರಚಾರದ ಗಿಮಿಕ್ ಇರಬಹುದೇ ಎಂದೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.