Select Your Language

Notifications

webdunia
webdunia
webdunia
webdunia

ಡ್ರೋಣ್ ಪ್ರತಾಪ್ ಗೆ 10 ದಿನಗಳ ನ್ಯಾಯಾಂಗ ಬಂಧನ

Drone Prathap

Krishnaveni K

ಬೆಂಗಳೂರು , ಸೋಮವಾರ, 16 ಡಿಸೆಂಬರ್ 2024 (12:34 IST)
ಬೆಂಗಳೂರು: ಕೃಷಿ ಹೊಂಡದಲ್ಲಿ ಸೋಡಿಯಂ ಸ್ಪೋಟಿಸಿ ವಿಡಿಯೋ ಮಾಡಿದ್ದ ಬಿಗ್ ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್ ಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತುಮಕೂರಿನ ತನ್ನ ಸ್ಮೇಹಿತರ ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಮಾಡಿ ವಿಡಿಯೋ ಮಾಡಿದ್ದ ಡ್ರೋಣ್ ಪ್ರತಾಪ್ ರನ್ನು ಮೊನ್ನೆಯಷ್ಟೇ ಬಂಧಿಸಲಾಗಿತ್ತು. ನಿನ್ನೆ ಸ್ಥಳಕ್ಕೆ ಕರೆತಂದು ಪೊಲೀಸರು ಮಹಜರು ಮಾಡಿದ್ದರು. ಇಂದಿಗೆ ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿತ್ತು.

ಈ ಹಿನ್ನಲೆಯಲ್ಲಿ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ನ್ಯಾಯಾಲಯ ಅವರಿಗೆ 10 ದಿನಗಳ ನ್ಯಾಯಾಂಗ ಬಂಧನ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.

ಇದೀಗ ಅವರ ಆರೋಪ ಸಾಬೀತಾದರೆ 10 ವರ್ಷಗಳವರೆಗೂ ಜೈಲು ಶಿಕ್ಷೆಯಾಗಬಹುದು ಎನ್ನಲಾಗುತ್ತಿದೆ. ಸ್ಪೋಟಕಗಳನ್ನು ಬಳಸಿ ಬ್ಲಾಸ್ಟ್ ಮಾಡುವುದು ಗಂಭೀರ ಅಪರಾಧವಾಗಿದ್ದು, ಡ್ರೋಣ್ ಪ್ರತಾಪ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Drone Prathap: ಡ್ರೋಣ್ ಪ್ರತಾಪ್ ಗೆ ಕಾದಿದೆ 10 ವರ್ಷ ಜೈಲು ಶಿಕ್ಷೆ