Select Your Language

Notifications

webdunia
webdunia
webdunia
webdunia

ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಬೆನ್ನಲ್ಲೇ ಕುಟುಂಬಸ್ಥರಿಂದ ಮಹತ್ವದ ನಿರ್ಧಾರ

Aniruddh Jatkar

Krishnaveni K

ಬೆಂಗಳೂರು , ಶುಕ್ರವಾರ, 12 ಸೆಪ್ಟಂಬರ್ 2025 (09:33 IST)
ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಘೋಷಣೆಯಾದ ಬೆನ್ನಲ್ಲೇ ಕುಟುಂಬಸ್ಥರಿಂದ ಮಹತ್ವದ ತೀರ್ಮಾನ ಹೊರಬಿದ್ದಿದೆ. ಇದು ಅಭಿಮಾನಿಗಳೂ ಖುಷಿಪಡುವ ವಿಚಾರ.

ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಸಿಗಬೇಕು ಎನ್ನುವುದು ಅಭಿಮಾನಿಗಳ ಬಹುದಿನಗಳ ಬಯಕೆಯಾಗಿತ್ತು. ಅದೀಗ ಈಡೇರಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ವಿಷ್ಣುವರ್ಧನ್ ಮತ್ತು ಬಿ ಸರೋಜಾದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ.

ಇದು ಅಭಿಮಾನಿಗಳ ಸಂತೋಷ ಹೆಚ್ಚಿಸಿದೆ. ಇದರ ಬೆನ್ನಲ್ಲೇ ವಿಷ್ಣುವರ್ಧನ್ ಕುಟುಂಬದ ಪರವಾಗಿ ಅಳಿಯ ಅನಿರುದ್ಧ ಜತಕರ ಮತ್ತೊಂದು ಘೋಷಣೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಲಾಗಿತ್ತು. ಇದು ಅಭಿಮಾನಿಗಳಿಗೆ ನೋವು ತರಿಸಿತ್ತು.

ಇದೇ ಜಾಗದಲ್ಲಿ ಮತ್ತೆ ಅಭಿಮಾನಗಳಿಗೆ ಸಮಾಧಿ ನಿರ್ಮಿಸಲು 10 ಗುಂಟೆ ಜಮೀನು ನೀಡಬೇಕು ಎಂದು ಕುಟುಂಬಸ್ಥರೂ ಸಿಎಂಗೆ ಮನವಿ ಮಾಡಿದ್ದಾರೆ. ಇದೀಗ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾದ ಬಳಿಕ ಮಾತನಾಡಿರುವ ಅನಿರುದ್ಧ ಅವರು, ಅದೇ ಜಾಗದಲ್ಲಿ ಸಮಾಧಿ ನಿರ್ಮಾಣವಾಗಬೇಕು. ಈ ಬಗ್ಗೆ ಈಗಾಗಲೇ ಸಿಎಂಗೂ ಮನವಿ ಮಾಡಿದ್ದೇವೆ. ಅವರು ಸ್ಪಂದಿಸಿದ್ದಾರೆ. ಮಂಟಪ ನಿರ್ಮಾಣಕ್ಕೆ ನಾವೇ ಖರ್ಚು ಹಾಕಿ ನಿರ್ಮಾಣ ಮಾಡುತ್ತೇವೆ ಎಂದು ಅವರು ಘೋಷಿಸಿದ್ದಾರೆ. ಈ ಕೆಲಸವೂ ಬೇಗನೇ ಆಗಲಿ ಎಂಬುದೇ ಅಭಿಮಾನಿಗಳ ಬಯಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಹೇಳನಕಾರಿ ಹೇಳಿಕೆ: ನಾಳೆ ನಟಿ, ಸಂಸದೆ ಕಂಗನಾಗೆ ಮಹತ್ವದ ದಿನ