ರಮ್ಯಾಗೆ ಡಿಬಾಸ್ ಅಭಿಮಾನಿಗಳು ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಡಾ ರಾಜ್ ಕುಟುಂಬದವರು ಪ್ರತಿಕ್ರಿಯಿಸಿದ್ದರು. ಶಿವಣ್ಣ, ವಿನಯ್ ರಾಜ್ ಕುಮಾರ್ ಮಹಿಳೆಯರ ಮೇಲಿನ ಅಪಮಾನ ಸಹಿಸಲ್ಲ. ರಮ್ಯಾ ಜೊತೆಗೆ ನಾವಿದ್ದೇವೆ ಎಂದಿದ್ದರು. ಇದನ್ನು ಯುವ ರಾಜ್ ಕುಮಾರ್ ಕೂಡಾ ಶೇರ್ ಮಾಡಿದ್ದರು.
ಇದರ ಬೆನ್ನಲ್ಲೇ ಡಿಬಾಸ್ ಅಭಿಮಾನಿಗಳ ಸಿಟ್ಟು ಶಿವಣ್ಣ ಮತ್ತು ದೊಡ್ಮನೆ ಮೇಲೆ ತಿರುಗಿದೆ. ಯುವ ಪತ್ನಿ ಶ್ರೀದೇವಿ ಜೊತೆಗಿನ ವಿಚ್ಛೇದನ ವಿಚಾರವನ್ನು ಕೆದಕಿ ಟಾಂಗ್ ಕೊಟ್ಟಿದ್ದಾರೆ. ಇದು ದೊಡ್ಮನೆ ಅಭಿಮಾನಿಗಳು ಕೆರಳುವಂತೆ ಮಾಡಿದೆ.
ಕೌಟುಂಬಿಕವಾಗಿ ನಡೆದ ಭಿನ್ನಾಭಿಪ್ರಾಯಗಳನ್ನು ಅವರೇ ಸರಿಮಾಡಿಕೊಳ್ಳುತ್ತಾರೆ. ಈಗ ನಡೆಯುತ್ತಿರುವ ಬೆಳವಣಿಗೆಯಲ್ಲಿ ಸುಖಾ ಸುಮ್ಮನೆ ಯುವ ರಾಜ್ ಕುಮಾರ್ ವೈಯಕ್ತಿಕ ವಿಚಾರ ಎಳೆದು ತರುವ ಅವಶ್ಯಕತೆ ಇಲ್ಲ. ನಮ್ಮ ಹೀರೋ ದಾಂಪತ್ಯ ಜೀವನದಿಂದ ಹೊರಬಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ತಟಸ್ಥರಾಗಿದ್ದಾರೆ. ನಿಮ್ಮ ಬೆಟ್ಟದಷ್ಟು ಸಮಸ್ಯೆಗಳನ್ನು ಮೊದಲು ಸರಿಪಡಿಸಿ. ನಮ್ಮ ಸಮಸ್ಯೆಯ ಯೋಚನೆ ನಿಮಗೆ ಬೇಕಾಗಿಲ್ಲ. ನಾವು ರಮ್ಯಾ ಪರ ನಿಂತಿದ್ದೇವೆ. ದಾಂಪತ್ಯ ಜೀವನಕ್ಕೂ ಸಾರ್ವಜನಿಕ ಜೀವನದಲ್ಲಿ ಇನ್ನೊಬ್ಬರ ತೇಜೋವಧೆ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಯುವ ಫ್ಯಾನ್ಸ್ ಖಡಕ್ ಆಗಿ ದರ್ಶನ್ ಫ್ಯಾನ್ಸ್ ಗೆ ವಾರ್ನ್ ಮಾಡಿದ್ದಾರೆ.