Webdunia - Bharat's app for daily news and videos

Install App

ಕನ್ನಡದಲ್ಲಿ ಹೇಳಿದ್ದರೆ ಅರ್ಥವಾಗುತ್ತಿತ್ತೇ? ಅಜಯ್‌ ದೇವಗನ್‌ ಗೆ ಸುದೀಪ್‌ ತಿರುಗೇಟು

Webdunia
ಬುಧವಾರ, 27 ಏಪ್ರಿಲ್ 2022 (18:36 IST)
ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂಬ ಚರ್ಚೆ ಇದೀಗ ಭಾರತೀಯ ಚಿತ್ರರಂಗದಲ್ಲಿ ಕೋಲಾಹಲ ಎಬ್ಬಿಸಿದ್ದು, ಅಜಯ್‌ ದೇವಗನ್‌ ಮತ್ತು ಸುದೀಪ್‌ ನಡುವಣ ಭಾಷಾ ವಾರ್‌ ಮತ್ತೊಂದು ತಿರುವು ಪಡೆದಿದೆ.
ನಿಮ್ಮ ಚಿತ್ರಗಳನ್ನು ಹಿಂದಿಯಲ್ಲಿ ಯಾಕೆ ಬಿಡುಗಡೆ ಮಾಡುತ್ತೀರಿ? ಯಾಕೆ ಹಿಂದಿಗೆ ಡಬ್ಬಿಂಗ್ ಮಾಡಿ ಬಿಡುತ್ತೀರಿ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಬಾಲಿವುಡ್ ನಟ ಅಜಯ್ ದೇವಗನ್ ಟಾಂಗ್ ಕೊಟ್ಟಿದ್ದರು.
ಇತ್ತೀಚೆಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದರು. ಇದಕ್ಕೆ ಟ್ವೀಟರ್‌ನಲ್ಲಿ ಕಾಣಿಸಿಕೊಂಡಿರುವ ಅಜಯ್‌ ದೇವಗನ್‌, ಹಿಂದಿನ ನಮ್ಮ ಭಾಷೆ. ಹಿಂದಿ ನಮ್ಮ ಮಾತೃಭಾಷೆ.
ನನ್ನ ಸಹೋದರರಾದ ಕಿಚ್ಚ ಸುದೀಪ್ ಅವರೇ ನಿಮ್ಮ ಪ್ರಕಾರ ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದಿದ್ದರು. ಹಾಗಾದರೆ ನೀವು ಹಿಂದಿಯಲ್ಲಿ ಏಕೆ ಸಿನಿಮಾ ರಿಲೀಸ್ ಮಾಡುತ್ತೀರಿ? ಹಿಂದಿಯಲ್ಲಿ ಡಬ್ ಮಾಡಿ ಏಕೆ ಚಿತ್ರ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಭಾಷೆ, ರಾಷ್ಟ್ರಭಾಷೆ. ಹಿಂದಿನಿಂದಲೂ ಇದೆ. ಎಂದೆಂದಿಗೂ ಇರುತ್ತದೆ. ಜನಗಣಮನ ಎಂದು ಟ್ವೀಟ್ ಮಾಡಿದ್ದಾರೆ .’
ಇದಕ್ಕೆ ಜಾಣತನದಿಂದ ಪ್ರತಿಕ್ರಿಯಿಸಿರುವ ಸುದೀಪ್, ಸಾರ್, ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್‌ಗಳನ್ನು ಗಮನಿಸಿದೆ. ಓದಿ ಅರ್ಥ ಮಾಡಿಕೊಂಡೆ. ನಾವು ಹಿಂದಿಯನ್ನು ಪ್ರೀತಿ ಮತ್ತು ಗೌರವ ನೀಡುತ್ತಿರುವುದರಿಂದ ನಮಗೆ ಈ ಗೌರವ ಲಭಿಸಿದೆ. ಒಂದು ವೇಳೆ ನಾನು ಕನ್ನಡದಲ್ಲಿ ಟೈಪ್ ಮಾಡಿ ಹಾಕಿದ್ದರೆ ನಿಮಗೆ ಅರ್ಥ ಆಗುತ್ತೆ? ನಾವು ಈ ಭಾರತಕ್ಕೆ ಸೇರಿದವರು ಅಲ್ಲವೇ ಸಾರ್ ಎಂದು ತಿರುಗೇಟು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments