Select Your Language

Notifications

webdunia
webdunia
webdunia
webdunia

ಹಿಂದಿಗೆ ಯಾಕೆ ಡಬ್ಬಿಂಗ್‌ ಮಾಡುತ್ತೀರಿ: ಸುದೀಪ್‌ ಗೆ ಅಜಯ್‌ ದೇವಗನ್‌ ಟಾಂಗ್‌

ajay devagan sudeep sandalwood ಸ್ಯಾಂಡಲ್‌ ವುಡ್‌ ಸುದೀಪ್‌ ಅಜಯ್‌ ದೇವಗನ್
bengaluru , ಬುಧವಾರ, 27 ಏಪ್ರಿಲ್ 2022 (17:45 IST)
ನಿಮ್ಮ ಚಿತ್ರಗಳನ್ನು ಹಿಂದಿಯಲ್ಲಿ ಯಾಕೆ ಬಿಡುಗಡೆ ಮಾಡುತ್ತೀರಿ? ಯಾಕೆ ಹಿಂದಿಗೆ ಡಬ್ಬಿಂಗ್‌ ಮಾಡಿ ಬಿಡುತ್ತೀರಿ ಎಂದು ಬಾಲಿವುಡ್‌ ನಟ ಅಜಯ್‌ ದೇವಗನ್‌ ಸ್ಯಾಂಡಲ್‌ ವುಡ್‌ ಸ್ಟಾರ್‌ ನಟ ಕಿಚ್ಚ ಸುದೀಪ್‌ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ.
ಇತ್ತೀಚೆಗೆ ಕಿಚ್ಚ ಸುದೀಪ್‌ ಟ್ವೀಟ್‌ ಮಾಡಿ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದರು. ಇದಕ್ಕೆ ಟ್ವೀಟರ್‌ ನಲ್ಲಿ ಪ್ರತಿಕ್ರಿಯಿಸಿರುವ ಅಜಯ್‌ ದೇವಗನ್‌, ಹಿಂದಿನ ನಮ್ಮ ಭಾಷೆ. ಹಿಂದಿ ನಮ್ಮ ಮಾತೃಭಾಷೆ ಎಂದಿದ್ದಾರೆ.
ನನ್ನ ಸಹೋದರರಾದ ಕಿಚ್ಚ ಸುದೀಪ್‌ ಅವರೇ ನಿಮ್ಮ ಪ್ರಕಾರ ಹಿಂದೆ ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದಿದ್ದೀರಿ. ಹಾಗಾದರೆ ನೀವು ಹಿಂದಿಯಲ್ಲಿ ಏಕೆ ಸಿನಿಮಾ ರಿಲೀಸ್‌ ಮಾಡುತ್ತೀರಿ? ಹಿಂದಿಯಲ್ಲಿ ಡಬ್‌ ಮಾಡಿ ಏಕೆ ಚಿತ್ರ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಭಾಷೆ, ರಾಷ್ಟ್ರಭಾಷೆ. ಹಿಂದಿ ಹಿಂದಿನಿಂದಲೂ ಇದೆ. ಎಂದೆಂದಿಗೂ ಇರುತ್ತದೆ. ಜನಗಣಮನ ಎಂದು ಟ್ವೀಟ್‌ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ಪ್ರತಿಮೆ ಅನಾವರಣಗೊಳಿಸಲು ಒಪ್ಪದ ಕಿಚ್ಚ ಸುದೀಪ್