Select Your Language

Notifications

webdunia
webdunia
webdunia
webdunia

ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ: ಪವನ್ ಕಲ್ಯಾಣ್‌ಗೆ ಪ್ರಕಾಶ್‌ ರಾಜ್‌ ಕೌಂಟರ್‌

DCM Pawan Kalyan, Hindi language Clash, Actor Prakash Raj

Sampriya

ಚೆನ್ನೈ , ಶನಿವಾರ, 15 ಮಾರ್ಚ್ 2025 (19:08 IST)
Photo Courtesy X
ಚೆನ್ನೈ (ತಮಿಳುನಾಡು): ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಹಿಂದಿ ಭಾಷೆಯ ಕುರಿತು ಇತ್ತೀಚೆಗೆ ಮಾಡಿದ ಹೇಳಿಕೆಗಳಿಗಾಗಿ ನಟ-ರಾಜಕಾರಣಿ ಪ್ರಕಾಶ್ ರಾಜ್ ಅವರು ಕಟುವಾದ ವಾಗ್ದಾಳಿ ನಡೆಸಿದ್ದಾರೆ.

ನಟ ಕಲ್ಯಾಣ್ ಅವರನ್ನು ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ತರಾಟೆಗೆ ತೆಗೆದುಕೊಂಡು, ಇತರರ ಮೇಲೆ "ಹಿಂದಿ ಹೇರಲು" ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಕಾಶ್ ರಾಜ್ ಅವರು,  "ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ. ಇದು ಬೇರೆ ಭಾಷೆಯನ್ನು ದ್ವೇಷಿಸುವ ಬಗ್ಗೆ ಅಲ್ಲ; ಇದು ನಮ್ಮ ಮಾತೃಭಾಷೆ ಮತ್ತು ನಮ್ಮ ಸಾಂಸ್ಕೃತಿಕ ಗುರುತನ್ನು ಸ್ವಾಭಿಮಾನದಿಂದ ರಕ್ಷಿಸುವ ಬಗ್ಗೆ. ಯಾರಾದರೂ, ದಯವಿಟ್ಟು ಪವನ್ ಕಲ್ಯಾಣ್ ಅವರಿಗೆ ಇದನ್ನು ವಿವರಿಸಿ." ಎಂದಿದ್ದಾರೆ.

ಕಾಕಿನಾಡದ ಪಿತಾಮಪುರದಲ್ಲಿ ನಡೆದ ಜನ ಸೇನಾ ಪಕ್ಷದ 12 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕಲ್ಯಾಣ್ ಅವರ ಇತ್ತೀಚಿನ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಪ್ರಕಾಶ್ ರಾಜ್ ಅವರು ಕೌಂಟರ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕತ್ರಿನಾ ಕೈಫ್‌ ಬೆನ್ನಲ್ಲೇ ಕುಕ್ಕೆ ಸುಬ್ರಹ್ಮಣ್ಯಗೆ ಭೇಟಿ ನೀಡಿದ ನಟ ಪ್ರಭುದೇವ