Select Your Language

Notifications

webdunia
webdunia
webdunia
webdunia

ಸರ್ಕಾರಿ ನೌಕರರ ಮೇಲಿನ ದಾಳಿ ಮಾಡುವವರನ್ನು ಸುಮ್ಮನೇ ಬಿಡಲ್ಲ: ಪವನ್ ಕಲ್ಯಾಣ್ ಎಚ್ಚರಿಕೆ

AndhraPradesh DCM Pawan Kalyan, YSRCP Leader C Sudarshan, Pawan Kalyan Reacts On Sudarshan

Sampriya

ಆಂಧ್ರಪ್ರದೇಶ , ಶನಿವಾರ, 28 ಡಿಸೆಂಬರ್ 2024 (16:30 IST)
Photo Courtesy X
ಆಂಧ್ರಪ್ರದೇಶ: ವೈಎಸ್‌ಆರ್‌ಸಿಪಿ ಸ್ಥಳೀಯ ನಾಯಕ ಸಿ.ಸುದರ್ಶನ್ ರೆಡ್ಡಿ ಅವರಿಂದ ಹಲ್ಲೆಗೊಳಗಾದ ದಲಿತ ಅಧಿಕಾರಿಯನ್ನು ಭೇಟಿಯಾದ ಪವನ್ ಕಲ್ಯಾಣ್ ಅವರು  ಸರ್ಕಾರಿ ನೌಕರರ ಮೇಲೆ ದಾಳಿ ಮಾಡುವ ರಾಜಕೀಯ ನಾಯಕರನ್ನು ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.

ಏನಿದು ಪ್ರಕರಣ: ಸುದರ್ಶನ್ ರೆಡ್ಡಿ ಇತರರೊಂದಿಗೆ ಸೇರಿ ಗಾಳಿವೀಡು ಮಂಡಲ ಪರಿಷತ್ ಅಭಿವೃದ್ಧಿ ಅಧಿಕಾರಿ (ಎಂಪಿಡಿಒ) ಜವಾಹರ್ ಬಾಬು ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ.

ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಯ ಮೇಲೆ ಯಾವುದೇ ರಾಜಕೀಯ ನಾಯಕ "ದಾಳಿ" ಅಥವಾ "ಅಡಚಣೆ" ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ವೈಎಸ್‌ಆರ್‌ಸಿಪಿ ನಾಯಕ ಸಿ ಸುದರ್ಶನ ರೆಡ್ಡಿಯಿಂದ ಹಲ್ಲೆಗೊಳಗಾದ ದಲಿತ ಸರ್ಕಾರಿ ಅಧಿಕಾರಿಯನ್ನು ಭೇಟಿ ಮಾಡಿದ ನಂತರ ಅವರು ಈ ಎಚ್ಚರಿಕೆ ನೀಡಿದರು.

"ನೀವು (ರಾಜಕೀಯ ನಾಯಕರು) ದುರಹಂಕಾರದಿಂದ ಅಧಿಕಾರಿಗಳ ಮೇಲೆ ದಾಳಿ ಮಾಡಿದರೆ, ನಿಮಗೆ ತಕ್ಕ ಶಿಕ್ಷೆಯನ್ನು ನಾವು ಖಚಿತಪಡಿಸುತ್ತೇವೆ" ಎಂದು ಕಲ್ಯಾಣ್ ಕಡಪಾ ರಿಮ್ಸ್ ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಕಲ್ಯಾಣ್ ಪ್ರಕಾರ, ಸುದರ್ಶನ್ ರೆಡ್ಡಿ ಅವರು ಇತರರೊಂದಿಗೆ ಸೇರಿ ಅಣ್ಣಮಯ್ಯ ಜಿಲ್ಲೆಯ ಗಾಳಿವೀಡು ಮಂಡಲ ಪರಿಷತ್ ಅಭಿವೃದ್ಧಿ ಅಧಿಕಾರಿ (ಎಂಪಿಡಿಒ) ಜವಾಹರ್ ಬಾಬು ಅವರ ಮೇಲೆ ಅಧಿಕೃತ ಕೊಠಡಿಯ ಕೀಲಿಗಳನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಹಲ್ಲೆ ಮತ್ತು ನಿಂದನೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಂದಕಕ್ಕೆ ಉರುಳಿದ್ದ ಸೇನಾ ವಾಹನ: ಮದುವೆ ನಿಶ್ಚಯವಾಗಿದ್ದ ಕೊಡಗಿನ ಯೋಧನ ಸ್ಥಿತಿ ಚಿಂತಾಜನಕ