Publish Date: Thu, 21 Oct 2021 (09:15 IST)
Updated Date: Thu, 21 Oct 2021 (09:31 IST)
ಬೆಂಗಳೂರು: ಹಿರಿತೆರೆಯಲ್ಲಿ ವಿಭಿನ್ನ ಪಾತ್ರಗಳ ಮೂಲಕ ಸದ್ದು ಮಾಡುತ್ತಿರುವ ಡಾಲಿ ಧನಂಜಯ್ ಈಗ ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಗಟ್ಟಿಮೇಳದ ಮೂಲಕ ಧನಂಜಯ್ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಧಾರವಾಹಿಯಲ್ಲಿ ಈಗ ನಾಯಕ ವೇದಾಂತ್-ನಾಯಕಿ ಅಮೂಲ್ಯ ವಿವಾಹ ಸೀಕ್ವೆನ್ಸ್ ನಡೆಯುತ್ತಿದೆ. ಈ ಮದುವೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಧನಂಜಯ್ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.