Select Your Language

Notifications

webdunia
webdunia
webdunia
webdunia

ಡಾಲಿ ಧನಂಜಯ್-ರಮ್ಯಾ ಜೊತೆಗಿರುವ ಫೋಟೋ ವೈರಲ್: ಒಟ್ಟಿಗೆ ನಟಿಸ್ತಾರಾ ಸ್ನೇಹಿತರು?

ಡಾಲಿ ಧನಂಜಯ್-ರಮ್ಯಾ ಜೊತೆಗಿರುವ ಫೋಟೋ ವೈರಲ್: ಒಟ್ಟಿಗೆ ನಟಿಸ್ತಾರಾ ಸ್ನೇಹಿತರು?
ಬೆಂಗಳೂರು , ಶನಿವಾರ, 9 ಜುಲೈ 2022 (17:23 IST)
ಬೆಂಗಳೂರು: ಮೋಹಕ ತಾರೆ ರಮ್ಯಾ ಚಿತ್ರರಂಗಕ್ಕೆ ವಾಪಸ್ ಆಗುವುದಾಗಿ ಹೇಳಿ ಎಷ್ಟೋ ದಿನಗಳಾಗಿವೆ. ಆದರೆ ಇದುವರೆಗೆ ಅವರಿಂದ ಸಿನಿಮಾ ಸುದ್ದಿ ಬಂದಿಲ್ಲ.

ಇದೀಗ ರಮ್ಯಾ ನಟ ಡಾಲಿ ಧನಂಜಯ್ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಮ್ಯಾ ಈ ಮೊದಲೂ ಡಾಲಿ ಧನಂಜಯ್ ಸಿನಿಮಾಗಳಿಗೆ ಶುಭ ಕೋರುವ ಮೂಲಕ ಅವರ ಸಿನಿಮಾಗಳಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ.

ಇದೀಗ ಈ ಫೋಟೋ ನೋಡಿದ ಮೇಲೆ ನೆಟ್ಟಿಗರು ಇಬ್ಬರೂ ಜೊತೆಯಾಗಿ ಸಿನಿಮಾ ಮಾಡುವ ಯೋಜನೆ ಇರಬಹುದಾ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಮೊದಲು ರತ್ನನ್ ಪ್ರಪಂಚ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು ನನಗೆ ಆಫರ್ ಬಂದಿತ್ತು ಎಂದು ರಮ್ಯಾ ಹೇಳಿಕೊಂಡಿದ್ದರು. ಆದರೆ ಆ ಸಿನಿಮಾದಲ್ಲಿ ಧನಂಜಯ್ ಜೊತೆಗೆ ನಟಿಸಲು ಸಾಧ‍್ಯವಾಗಿರಲಿಲ್ಲ. ಈಗಲಾದರೂ ಆ ಕನಸು ನನಸಾಗಬಹುದೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಲೀಟ್ ಮಾಡಿದ್ದ ದೃಶ್ಯವನ್ನು ಹೊರಬಿಟ್ಟ 777 ಚಾರ್ಲಿ ಸಿನಿಮಾ ತಂಡ