ಬೆಂಗಳೂರು: ಗುರುಪ್ರಸಾದ್ ನಿರ್ದೇಶನದ ಡೈರೆಕ್ಟರ್ ಸ್ಪೆಷಲ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಡಾಲಿ ಧನಂಜಯ್ ಅವರು ಗುರುಪ್ರಸಾದ್ ಸಾವಿನ ಸುದ್ದಿ ಕೇಳಿ ವಿಕ್ಟೋರಿಯಾ ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ.
ಸಾಲದ ಹೊರೆಯಿಂದ ಮಾನಸಿಕವಾಗಿ ಕುಗ್ಗಿದ್ದರಿಂದ ಗುರುಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನೂ ಖ್ಯಾತ ನಿರ್ದೇಶಕನ ಸಾವಿನ ಸುತ್ತಾ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಮೊದಲ ಪತ್ನಿಯಿಂದ ದೂರಾವಾದ ಗುರುಪ್ರಸಾದ್ ಅವರು 48ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದರು. ಈಚೆಗೆ ಎರಡನೇ ಪತ್ನಿಯಿಂದಲೂ ದೂರವಾಗಿ ಒಬ್ಬಂಟಿಯಾಗಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಗುರುಪ್ರಸಾದ್ ಸಾವಿನ ವಿಚಾರ ತಿಳಿದು ಎರಡನೇ ಪತ್ನಿ ಅಪಾರ್ಟ್ಮೆಂಟ್ ಬಂದಿದ್ದಾರೆ
ಇನ್ನೂ ಗುರುಪ್ರಸಾದ್ ಅವರು ವೈಯಕ್ತಿವಾಗಿ ಎಲ್ಲರಿಂದಲೂ ದೂರ ಉಳಿದಿದ್ದರಿಂದ ಕುಟುಂಬದವರಿಲ್ಲದೆ ಗುರುಪ್ರಸಾದ್ ಮೃತದೇಹ ಅನಾಥವಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಗುರುಪ್ರಸಾದ್ ಮೃತದೇಹ ತರಲಾಗಿದೆ. ವಿಷಯ ತಿಳಿದು ಆಸ್ಪತ್ರೆಗೆ ಡಾಲಿ ಧನಂಜಯ್ ಬಂದಿದ್ದು, ಗುರುಪ್ರಸಾದ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನಟ ದುನಿಯಾ ವಿಜಯ್, ಡಾಲಿ ಧನಂಜಯ, ಸತೀಶ್ ನೀನಾಸಂ ಅವರ ನೇತೃತ್ವದಲ್ಲಿ ಗುರುಪ್ರಸಾದ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ.