ಬೆಂಗಳೂರು: ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಸಾವಿನ ಬೆನ್ನಲ್ಲೇ ನಾಲ್ಕು ಅನುಮಾನಗಳು ವ್ಯಕ್ತವಾಗಿದೆ. ಬುದ್ಧಿವಂತ ಡೈರೆಕ್ಟರ್ ಎಂದೇ ಗುರುತಿಸಿಕೊಂಡಿರುವ ನೇರ ಮಾತಿನ ಗುರುಪ್ರಸಾದ್ ಅವರು ಸಾವು ಕನ್ನಡ ಇಂಡಸ್ಟ್ರಿಗೆ ದೊಡ್ಡ ಆಘಾತವಾಗಿದೆ.
ಗುರುಪ್ರಸಾದ್ ಅವರು ಮಾದನಾಯಕಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಅನುಮಾನ 1 ಸಾಲಗಾರರ ಕಾಟ:
ಪ್ರಾಥಮಿಕ ಮಾಹಿತಿ ಪ್ರಕಾರ ಗುರುಪ್ರಸಾದ್ ಅವರು ಮೂರು ಕೋಟುಯಷ್ಟು ಸಾಲ ಮಾಡಿಕೊಂಡಿದ್ದರು. ಸಾಲ ನೀಡಿದವರು ಹಲವು ಪ್ರಕರಣವನ್ನು ದಾಖಲಿಸಿದ್ದರು. ರಂಗನಾಯಕ ಸಿನಿಮಾ ಸೋತಿದ್ದು ಗುರುಪ್ರಸಾದ್ ಅವರಿಗೆ ಭಾರೀ ಸಂಕಷ್ಟ ತಂದಿಟ್ಟಿತ್ತು.
ಅನುಮಾನ 2 ಸಿನಿಮಾ ಬಿಡುಗಡೆಗೆ ಒದ್ದಾಟ:
ಕನ್ನಡ ಇಂಡಸ್ಟ್ರಿಯ ಮಠ, ಎದ್ದೇಳು ಮಂಜುನಾಥ ಅಂತಹ ಸಕ್ಸಸ್ ಸಿನಿಮಾ ನೀಡಿದ ಗುರುಪ್ರಸಾದ್ ಅವರು ಈಚೆಗೆ ತಮ್ಮ ನಿರ್ದೇಶನದ ಎದ್ದೇಳು ಮಂಜುನಾಥ 2 ಚಿತ್ರೀಕರಣ ಮುಕ್ತಾಯವಾಗಿ ಎರಡು ವರ್ಷವಾಗಿದ್ದರೂ ಬಿಡುಗಡೆ ಪರದಾಡುತ್ತಿದ್ದರು. ಈ ಚಿತ್ರದ ನಿರ್ದೇಶನ ಮಾಡುವುದರ ಜೊತೆಗೆ ಗುರುಪ್ರಸಾದ್ ಅಭಿನಯಿಸಿದ್ದರು. ಈ ಸಿನಿಮಾ ನಿರ್ಮಾಣ ಬಿಡುಗಡೆಗಾಗಿ ಕೋಟ್ಯಂತರ ರೂ. ಸಾಲ ಕೂಡಾ ಮಾಡಿದ್ದರು ಎನ್ನಲಾಗಿದೆ.
ಬಂಧನ ಭೀತಿ ಎದುರಿಸುತ್ತಿದ್ದ ಗುರುಪ್ರಸಾದ್:
ಸಾಲ ವಾಪಸು ನೀಡದ ಪ್ರಕರಣದಲ್ಲಿ ಗುರುಪ್ರಸಾದ್ ಅವರನ್ನು ಈ ವರ್ಷದ ಜನವರಿಯಲ್ಲಿ ಬೆಂಗಳೂರಿನ ಗಿರಿನಗರ ಠಾಣೆ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದರು. ಅರೆಸ್ಟ್ ಆಗುವ ಭಯದಲ್ಲಿ ಸಾವಿಗೆ ಶರಣಾಗಿರುವ ಸಾಧ್ಯತೆಯಿದೆ.
ಹೀಗೇ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.