Select Your Language

Notifications

webdunia
webdunia
webdunia
webdunia

ನಿರ್ದೇಶಕ ಗುರುಪ್ರಸಾದ್ ಪುರಾಣವೆಲ್ಲಾ ಇಂಚಿಂಚೂ ಬಿಚ್ಚಿಟ್ಟ ನಟ ಜಗ್ಗೇಶ್

Director GuruPrasadh, Actor Jaggesh GuruPrasadh FriendShip, Mata Cinema

Sampriya

ಬೆಂಗಳೂರು , ಭಾನುವಾರ, 3 ನವೆಂಬರ್ 2024 (12:45 IST)
Photo Courtesy X
ಬೆಂಗಳೂರು: ಆತ್ಮಹತ್ಯೆಗೆ ಶರಣಾದ ಗುರುಪ್ರಸಾದ್‌ ನಡವಳಿಕೆಯಿಂದ ಅನೇಕರಿಗೆ ನೋವಾಗಿದೆ. ಆತನ ಅಹಂಕಾರದಿಂದ ಎಲ್ಲರೂ ದೂರವಾಗುತ್ತಾ ಹೋದರು. ಹಲವು ಬಾರಿ ಆತನನ್ನು ಸರಿಮಾಡಲು ಪ್ರಯತ್ನಿಸಿದೆ ಆದರೆ ಸಾಧ್ಯವಾಗಲಿಲ್ಲ. ವಿಪರೀತ ಕುಡಿತದ ಚಟವೇ ಈ ಸ್ಥಿತಿಗೆ ಕಾರಣ ಎಂದು ನಟ ಜಗ್ಗೇಶ್ ಹೇಳಿದರು.

ಗುರುಪ್ರಸಾದ್ ಜತೆಗಿನ ಬಾಂಧ್ಯವದ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ಅವರು, ನಮ್ಮಿಬ್ಬರ ಭೇಟಿಯ ಶುರುವಿನ ಸಂದರ್ಭದಲ್ಲಿ ಗುರುಪ್ರಸಾದ್‌ ಬ್ಯಾಗ್‌ತುಂಬಾ ಬುಕ್ ಹಾಗೂ ಪೆನ್ನು ಹಿಡಿದುಕೊಂಡು ಕಾಣಿಸಿಕೊಳ್ಳುತ್ತಿದ್ದ, ದಿನ ಕಳೆದಂತೆ ನೋಡಿದ್ದು ಬ್ಯಾಗ್‌ನಲ್ಲಿ ಮದ್ಯದ ಬಾಟಲ್ ಹಿಡಿದುಕೊಂಡಿರುವ ಗುರುಪ್ರಸಾದ್ ನನ್ನು.

 ವಿಪರೀತ ಕುಡಿತದ ಚಟಕ್ಕೆ ಒಳಗಾದ ಗುರುಪ್ರಸಾದ್, ತನ್ನ ತಾಯಿಗೂ ಮರ್ಯಾದೆಯನ್ನು ನೀಡುತ್ತಿರಲಿಲ್ಲ. ಆತನ ಪತ್ನಿ ಹಾಗೂ ನಾನು ತುಂಬಾನೇ ಸರಿ ಮಾಡಲು ಪ್ರಯತ್ನಿಸಿದೆವು. ಆದರೆ ಅಹಂಕಾರದಿಂದ ಯಾರಾ ಮಾತನ್ನು ಕೇಳುತ್ತಿರಲಿಲ್ಲ. ಇದರಿಂದ ಮೊದಲ ಪತ್ನಿಯಿಂದ ದೂರವಾಗಿ, ಎರಡನೇ ಮದುವೆ ಮಾಡಿಕೊಂಡ. ಈಗ ಸಣ್ಣ ಮಗು ಬೇರೆ ಇದೆ ಎಂದರು.

ಇನ್ನೂ ವಿಪರೀತ ಕುಡಿತದ ಚಟದಿಂದ ಹಲವು ಬಾರಿ ಕರೆ ಮಾಡಿ ನನಗೆ ಮದ್ಯದ ಬಾಟಲಿ ನೀಡುವಂತೆ ಬೇಡಿಕೆಯನ್ನು ಇಡುತ್ತಿದ್ದ.  ಕಳೆದ 10 ವರ್ಷಗಳಿಂದ ನಾನು ಆತನ ಸಂಪರ್ಕದಿಂದ ದೂರವಾದೆ ಎಂದು ಜಗ್ಗೇಶ್ ಹೇಳಿದರು. ಆತನ ಮೊದಲ ಪತ್ನಿ ದೇವತೆಯಂತವಳು. ತಾಯಿಗೆ ತುಂಬಾ ಕೆಟ್ಟ ಮಾತುಗಳಿಂದ ಬೈತಾ ಇದ್ದ. ಹೆತ್ತ ತಾಯಿಗೆ ಗೌರವ ಕೊಡ್ಬೇಕೆಂದು ಬುದ್ಧಿಮಾತು ಹೇಳ್ತಾ ಇದ್ದೆ, ಆದರೆ ಕೇಳ್ತಾನೆ ಇರ್ಲಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣು