Select Your Language

Notifications

webdunia
webdunia
webdunia
webdunia

ಪೃಥ್ವಿ ಅಂಬಾರ್‌ಗೆ ನಾಯಕಿಯಾದ ದೊಡ್ಮನೆ ಬ್ಯೂಟಿ ಧನ್ಯರಾಮ್

Dhanyaramkumar

Sampriya

ಬೆಂಗಳೂರು , ಶುಕ್ರವಾರ, 28 ಜೂನ್ 2024 (17:40 IST)
Photo Courtesy X
ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಆ್ಯಕ್ಷನ್ ಕಟ್ ಹೇಳುತ್ತಿರುವ ಚೌಕಿದಾರ್ ಸಿನಿಮಾಗೆ ನಾಯಕಿ ಆಯ್ಕೆ ಪಕ್ಕಾ ಆಗಿದೆ. ದೊಡ್ಮನೆ ಕುಡಿ ಧನ್ಯರಾಮ್ ಅವರು ಪೃಥ್ವಿ ಅಂಬಾರ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಚೆಗೆ ಈ ಚಿತ್ರತಂಡಕ್ಕೆ ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡು ಸುದ್ದಿಯಾಗಿದ್ದರು.

ನಿನ್ನ ಸನಿಹಕೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್‌ಗೆ ಪಾದಾರ್ಪಣೆ ಮಾಡಿದ ಧನ್ಯ ಅವರು ಈಚೆಗೆ  ಜಡ್ಜಮೆಂಟ್ ಸಿನಿಮಾದಲ್ಲಿ ಅಭಿನಯಿಸಿದ್ದರು.  ಇನ್ನೂ ಚೌಕಿದಾರ್ ಸಿನಿಮಾವನ್ನು ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿದೆ.

ವಿದ್ಯಾ ಶೇಖರ್ ಬ್ಯಾನರ್ ಅಡಿಯಲ್ಲಿ ಡಾ.ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಸಚಿನ್‌ ಬಸ್ರೂರು ಅವರು ಸಂಗೀತವಿದೆ.  ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ.  ಮುಂದಿನ ತಿಂಗಳು ಈ ಸಿನಿಮಾ ಸೆಟ್ಟೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ಅಭಿಮಾನಿಗಳೆ ತಾಳ್ಮೆ ಕಳೆದುಕೊಳ್ಳಬೇಡಿ ಎಂದಾ ಸೋನು ಗೌಡ