Publish Date: Sat, 23 Dec 2017 (07:12 IST)
Updated Date: Sat, 23 Dec 2017 (07:19 IST)
ಬೆಂಗಳೂರು: ನಟ ನಿರ್ದೇಶಕ ಹುಚ್ಚ ವೆಂಕಟ್ ಅವರು ಸುದ್ದಿ ವಾಹಿನಿಯೊಂದರಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕರೊಬ್ಬರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆಯೊಂದು ಸಂಭವಿಸಿದೆ.
ನಿರ್ದೇಶಕ ಮೆಲ್ವಿನ್ ವಿರುದ್ದ ವಂಚನೆ ಆರೋಪ ಹೊರಿಸಿದ್ದ ಮುಂಬೈ ಮೂಲದ ಐಟಂ ಡ್ಯಾನ್ಸರ್ ಶರಣ್ಯಾ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಯೊಂದು ಮೆಲ್ವಿನ್ ಹಾಗು ಚಿತ್ರತಂಡದ ನಡುವೆ ಚರ್ಚೆ ನಡೆಸುತ್ತಿತ್ತು. ಇದರಲ್ಲಿ ಹುಚ್ಚ ವೆಂಕಟ್ ಕೂಡ ಪಾಲ್ಗೊಂಡಿದ್ದರು.
ಚರ್ಚೆ ನಡೆಯುವ ಸಂದರ್ಭದಲ್ಲಿ ಹುಚ್ಚ ವೆಂಕಟ್ ತಾಳ್ಮೆ ಕಳೆದುಕೊಡು ನಿರ್ದೇಶಕರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಅಲ್ಲಿದ್ದವರು ಸಮಾಧಾನ ಪಡಿಸಿದರು.ಆನಂತರ ಐಟಂ ಸಾಂಗ್ ನಟಿಗೆ ಹಣ ನೀಡಬೇಕೆಂದು ತಿಳಿಸಿದ ಹುಚ್ಚ ವೆಂಕಟ್ ಐಟಂ ಸಾಂಗ್ ಬ್ಯಾನ್ ಆಗಬೇಕೆಂದು ಸೂಚನೆ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ