Webdunia - Bharat's app for daily news and videos

Install App

ನಟ ದರ್ಶನ್‌ ಬಳಿ ಇದ್ದ ಗನ್ ಸೀಜ್, ಸಿಕ್ಕಿದ್ದೆಲ್ಲಿ ಗೊತ್ತಾ

Sampriya
ಮಂಗಳವಾರ, 21 ಜನವರಿ 2025 (16:01 IST)
ಬೆಂಗಳೂರು:  ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಸಿಕ್ಕರೂ ಕೂಡಾ ಸಂಕಷ್ಟ ಮಾತ್ರ ತಪ್ಪಿಲ್ಲ. ಸದ್ಯ ದರ್ಶನ್ ಅವರು ಬೆನ್ನು ನೋವಿನಿರುವ ಕಾರಣ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ. ಇದೀಗ ಪೊಲೀಸರು ದರ್ಶನ್‌ ಬಳಿ ಇದ್ದ ಗನ್‌ ಸೀಜ್ ಮಾಡಿದ್ದಾರೆ.

ಕಮಿಷನರ್ ಆದೇಶದ ಬೆನ್ನಲ್ಲೇ ದರ್ಶನ್ ಗನ್ ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ತಾತ್ಕಾಲಿಕವಾಗಿ ಗನ್ ಪರವಾನಗಿ ರದ್ದು ಮಾಡಲಾಗಿತ್ತು. ಪರವಾನಗಿ ರದ್ದು ಮಾಡಿದ್ದ ಬೆನ್ನಲ್ಲೆ ದರ್ಶನ್‌ಗೆ ಆರ್‌.ಆರ್‌ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.

ನೋಟಿಸ್ ನೀಡಿದ್ದರೂ ಗನ್ ಜಮೆ ಮಾಡಲು ದರ್ಶನ್ ಹಿಂದೇಟು ಹಾಕಿದ್ದರು. ಇದೀಗ ಪೊಲೀಸರು ದರ್ಶನ್ ಮನೆಗೆ ತೆರಳಿ ಅವರ ಗನ್ ಸೀಜ್ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ  ಫ್ಲ್ಯಾಟ್‌ನಲ್ಲಿದ್ದ ಗನ್ ಅನ್ನು ಸೀಜ್ ಮಾಡಲಾಗಿದೆ.

ಸಹೋದರ ದಿನಕರ್ ನಿರ್ದೇಶನದ ಬಹುನಿರೀಕ್ಷಿತ ರಾಯಲ್ ಸಿನಿಮಾವನ್ನು ತಾಯಿ ಮೀನಾ ಜತೆ ದರ್ಶನ್ ಅವರು ವೀಕ್ಷಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ರಾಯಲ್ ಸಿನಿಮಾ ತಂಡದ ಜತೆ ದರ್ಶನ್ ನಿಂತಿರುವ ಪೋಟೋ ವೈರಲ್ ಆಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments