Select Your Language

Notifications

webdunia
webdunia
webdunia
webdunia

ನಟ ದರ್ಶನ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು ಗೊತ್ತಾ?

ನಟ ದರ್ಶನ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು ಗೊತ್ತಾ?
bangalore , ಬುಧವಾರ, 22 ನವೆಂಬರ್ 2023 (08:44 IST)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಬುಲ್ ಬುಲ್ ಚಿತ್ರದ ಮೂಲಕ ರಜತ ಪರದೆಯಲ್ಲಿ ತನ್ನ ಪ್ರತಿಭೆ ತೋರಲು ಆರಂಭ ಮಾಡಿದ ಈ ಕಲಾವಿದೆ ಆ ಬಳಿಕ ಹೆಚ್ಚು ಚಿತ್ರಗಳನ್ನು ದರ್ಶನ್ ಅವರ ಜೊತೆ ನಟಿಸಿದಳು. ಅಲ್ಲದೆ ಆತನ ಜೊತೆ ಅಭಿನಯಿಸುವುದು ತನಗೆ ಹೆಚ್ಚಿನ ಕಂಫರ್ಟ್  ಎಂದು ಹೇಳಿ ಎಲ್ಲರ ಚಿತ್ತ ಇವರಿಬ್ಬರತ್ತ ಹೋಗುವಂತೆ ಮಾಡಿದ್ದು ಹಳೆಯ ಸುದ್ದಿ. ಆದರೆ ವೈಯಕ್ತಿಕವಾಗಿ ಆಕೆಗೆ ದರ್ಶನ್ ಅತ್ಯುತ್ತಮ ಸ್ನೇಹಿತನಂತೆ ಆಗಿದ್ದಾರಂತೆ. 
 
ಕೆಲವು ತಾರ ಜೋಡಿಗಳು ಅನೇಕ ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದಾರೆ. ಇದು ಪ್ರತಿಯೊಂದು ಚಿತ್ರರಂಗದಲ್ಲೂ ಕಂಡುಬಂದಿದೆ. ಅದಕ್ಕೆ ಕನ್ನಡ ಚಿತ್ರರಂಗವು ಸಹ ಹೊರತಲ್ಲ. ಆದರೆ ಹೆಚ್ಚು ಚಿತ್ರಗಳಲ್ಲಿ ಒಂದೇ ಜೋಡಿ ನಟಿಸಿದರೆ ಮಾಧ್ಯಮಗಳು ಅವರ ಬಗ್ಗೆ ಇಲ್ಲಸಲ್ಲದ್ದು ಹರಡುವುದು ಸಾಮಾನ್ಯ ಸಂಗತಿ. 
 
ಇದಕ್ಕೆ ಕಾರಣ ಮಾಧ್ಯಮಗಳು ಹೇಗಾದರೂ ಆಗಿರಲಿ  ಜೀವಂತವಾಗಿರ ಬೇಕು ಎನ್ನುವ ಪದ್ಧತಿಯನ್ನು ಅಳವಡಿಸಿ ಬಿಟ್ಟಿದ್ದಾರೆ ಮಾಧ್ಯಮಿಗಳು. ಈಗ ಕನ್ನಡ ಚಿತ್ರರಂಗದ ಯಶಸ್ವಿ ಜೋಡಿ ದರ್ಶನ್ ಮತ್ತು ರಚಿತ ರಾಮ್.
 
ಅವರ ಕಷ್ಟ ಸುಖಗಳು ಸೇರಿದಂತೆ ಅನೇಕ ವಯಕ್ತಿಕ ಸಂಗತಿಗಳನ್ನು ಸಹಿತ ದರ್ಶನ್ ಗೆ ಹೇಳಿದ್ದಾಳಂತೆ , ತನ್ನ ಬದುಕಿಗೆ ಅಗತ್ಯ ಇರುವ ಸಮಯದಲ್ಲಿ ಅನೇಕ ಸಲಹೆಗಳನ್ನು ತೆಗೆದುಕೊಳ್ಳುತ್ತಾಳಂತೆ. ಅಷ್ಟರಮಟ್ಟಿಗೆ ದರ್ಶನ್ ಫ್ರೆಂಡ್ ಅಂತೆ.. ಇಷ್ಟೆಲ್ಲಾ ಅಂತೆಗಳ ನಡುವೆ ಇವರ ಸ್ನೇಹ ಸಾಗುತ್ತಿದೆಯಂತೆ!

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಪೂಜಾಗಾಂಧಿ ಬಗ್ಗೆ ಹೊಸ ಸುದ್ದಿ ಹರಡುತ್ತಿದೆ ಏನ್ ಗೊತ್ತಾ?